Ad Widget

ಹಾಲೆಮಜಲು : ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ನಡುಗಲ್ಲು, ಹಾಲೆಮಜಲು ಮತ್ತು ಮೆಟ್ಟಿನಡ್ಕ ಪ್ರಗತಿಬಂಧು – ಸ್ವಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಸಮಾರಂಭ ಇಂದು ಹಾಲೆಮಜಲಿನ ಶ್ರೀ ವೆಂಟಟೇಶ್ವರ ಸಭಾಭವನದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಗುತ್ತಿಗಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಎರ್ದಡ್ಕ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಈ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿದ ಮರಕತ ನಾಲ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆರವರು ಧರ್ಮಸ್ಥಳ ಯೋಜನೆಯಿಂದ ಗ್ರಾಮದ ರೈತರಿಗೆ ಪ್ರಯೋಜನ ಆಗಿ ಬದಲಾವಣೆ ಆದ ಬಗ್ಗೆ ಹೇಳಿದರು. ಈ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಜವಾಬ್ದಾರಿ ಮತ್ತು ದಾಖಲಾತಿ ಹಸ್ತಾಂತರ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ನ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಧರ್ಮಸ್ಥಳ ಯೋಜನೆಯಿಂದ ರೈತರು ಬೆಳೆದು ಬಂದ ದಾರಿ ಬಗ್ಗೆ, ಕ್ಷೇತ್ರದ ಪರಿಚಯದ ಬಗ್ಗೆ, ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ, ಸಂಘಗಳ ಮತ್ತು ಒಕ್ಕೂಟಗಳ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ, ಯೋಜನೆಯಿಂದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಅನುಷ್ಠಾನ ಮಾಡಿ ಕುಟುಂಬ ಅಭಿವೃದ್ಧಿ ಆಗಿರುವ ಬಗ್ಗೆ, ವಿವಿಧ ವಿಮಾ ಯೋಜನೆಗಳ ಬಗ್ಗೆ, ಮೂಲಭೂತ ಸೌಕರ್ಯಗಳ, ಅನುದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನೀಡಿರುವ ಸೇವೆಗಳ ಬಗ್ಗೆ ಸವಿ ವಿವರವಾದ ಮಾಹಿತಿ ಮಾರ್ಗದರ್ಶನ ನೀಡಿದರು. ಈ ಸಮಾರಂಭದ ಮುಖ್ಯ ಅತಿಥಿಯವರಾದ ಸುಳ್ಯ ತಾಲೂಕಿನ ಜನಜಾಗೃತಿ ಸದಸ್ಯ ವಿಜಯಕುಮಾರ್ ಚಾರ್ಮತ ಮಾತನಾಡಿ “ಧರ್ಮಸ್ಥಳ ಯೋಜನೆ ಬರುವ ಮೊದಲು ಇದ್ದ ಈ ಪ್ರದೇಶದ ರೈತರ ಸ್ಥಿತಿಗತಿಗಳ ಬಗ್ಗೆ, ಯೋಜನೆ ಬಂದ ನಂತರ ಆದ ಬದಲಾವಣೆ ಬಗ್ಗೆ, ಒಕ್ಕೂಟಗಳ ನಿರ್ವಹಣೆ ಬಗ್ಗೆ, ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಕಾರ್ಯವೈಕರಿಗಳ ಬಗ್ಗೆ, ಯೋಜನೆಯಿಂದ ಕುಟುಂಬಗಳ ಅಭಿವೃದ್ಧಿ ಆಗಿರುವ ಬಗ್ಗೆ ಮಾಹಿತಿ ನೀಡಿದರು. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ| ಚೈತ್ರಾಭಾನು ಮಾತನಾಡಿ “ಜ್ಞಾನ ವಿಕಾಸ ಕೇಂದ್ರಗಳಿಂದ ಮಹಿಳೆಯರು ತುಂಬಾ ಎಲ್ಲಾ ವಿಚಾರಗಳಲ್ಲಿ ಸಬಲೀಕರಣ ಹೊಂದಿದ್ದಾರೆ, ಯೋಜನೆಯಿಂದ ಕೌಟುಂಬಿಕದಲ್ಲಿ, ಮಕ್ಕಳ ಶಿಕ್ಷಣದಲ್ಲಿ, ಅರೋಗ್ಯದಲ್ಲಿ ತುಂಬಾ ಸುಧಾರಣೆ ಆಗಿದೆ” ಎಂದು ಹೇಳಿದರು.
ಈ ಸಮಾರಂಭದಲ್ಲಿ ಎಸ್.ಎಸ್.ಎಲ್‌.ಸಿ., ಪಿಯುಸಿ, ಡಿಗ್ರಿ ಶಾಲಾ ಮಕ್ಕಳಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು, ವೈದ್ಯಾಧಿಕಾರಿಯವರನ್ನು, ಆಶಾ ಕಾರ್ಯಕರ್ತೆಯರನ್ನು ಸನ್ಮಾನ ಮಾಡಲಾಯಿತು. ಜನಮಂಗಲ ಕಾರ್ಯಕ್ರಮದಲ್ಲಿ ಮಂಜೂರು ಆದ ವಿಕಲಚೇತಕರಿಗೆ ಸಾಮಗ್ರಿಯನ್ನು ವಿತರಣೆ ಮಾಡಲಾಯಿತು. ಪದಗ್ರಹಣ ಸಮಾರಂಭದ ಮೊದಲು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಸಮಾರಂಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರು ಮತ್ತು ನಿಕಟಪೂರ್ವ ಪದಾಧಿಕಾರಿಗಳು, ನೂತನ ಅಧ್ಯಕ್ಷರು ಮತ್ತು ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರಿನ ಗಣ್ಯರು, ಜನಪ್ರತಿನಿಧಿಗಳು, ಎಲ್ಲಾ ಭಜನಾ ಮಂಡಳಿಯ ಪದಾಧಿಕಾರಿಗಳು, ಜನಜಾಗೃತಿಯ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಸಂಘಗಳ ಪ್ರತಿನಿಧಿಗಳು ಮತ್ತು ಸದಸ್ಯರು, ವಲಯದ ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡರವರು ಸ್ವಾಗತಿಸಿದರು. ನಾಲ್ಕೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿಶ್ಚಂದ್ರ ಕುಳ್ಳಂಪಾಡಿ ವರದಿ ವಾಚಿಸಿದರು. ಮೆಟ್ಟಿನಡ್ಕ ಸೇವಾಪ್ರತಿನಿಧಿ ರಮೇಶ್ ವಂದಿಸಿದರು. ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ನಿರೂಪಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!