ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿಗೆ ನಾಲ್ಕು ಗಂಟೆಗಳಲ್ಲಿ ಸುಮಾರು 41,000 ಸಾವಿರದಷ್ಟು ಹಣವು ಕೊಲ್ಲಮೊಗ್ರ ಗ್ರಾಮದಲ್ಲಿ ಸಂಗ್ರಹವಾಗಿದೆ. ಉದಯ ಶಿವಾಲ ಅವರು ವಾಟ್ಸಪ್ ಗ್ರೂಪ್ ನ್ನು ರಚಿಸಿ ಸಹಾಯಕ್ಕೆ ಮನವಿ ಮಾಡಿದ್ದರು. ನೆರೆ ಹಾನಿ ಮತ್ತು ಪ್ರವಾಹಕ್ಕೆ ಸಿಲುಕಿ ಚೇತರಿಸಿಕೊಳ್ಳುತ್ತೀರುವ ಈ ಗ್ರಾಮದಲ್ಲಿ ಇಷ್ಟು ಮೊತ್ತ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿದ್ದು ಇತರರ ಕಷ್ಟ ಕೂಡ ತನ್ನ ಕಷ್ಟವೆಂದು ತಿಳಿದ ಸಹಾಯ ಮಾಡಿದ ಜನತೆಯ ತ್ಯಾಗದ ಮನೋಭಾವನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೆ.13 ರಂದು ಸಂಗ್ರಹವಾದ ಹಣವನ್ನು ಸಮೀಕ್ಷಾ ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದು ಉದಯ ಶಿವಾಲ ತಿಳಿಸಿದ್ದಾರೆ. (ವರದಿ: ಉಲ್ಲಾಸ್ ಕಜ್ಜೋಡಿ)
- Friday
- April 4th, 2025