Ad Widget

ಗುತ್ತಿಗಾರು :- ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ-ಗ್ರಾಮ ನೈರ್ಮಲ್ಯ ಯೋಜನೆ ತಯಾರಿಯ ಸಭೆ

ಸ್ವಚ್ಛ ಭಾರತ್ (ಗ್ರಾ) ಯೋಜನೆಯ ಅಡಿಯಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕೇಂದ್ರ ಜಲಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೂಚನೆಯಂತೆ ಗುತ್ತಿಗಾರು ಗ್ರಾಮದಲ್ಲಿ ಜನರ ಸಹಭಾಗಿತ್ವದೊಂದಿಗೆ ಯೋಜನೆ ಸೆ.09 ರಂದು ಗ್ರಾಮ ಪಂಚಾಯತ್ ನ ಗಿರಿಜನ ಸಭಾಭವನದಲ್ಲಿ ನಡೆಸಲಾಯಿತು.

. . . . . .

ಗುತ್ತಿಗಾರು ಗ್ರಾಮದ ನಕ್ಷೆ ಬಿಡಿಸಿ ಮುಖ್ಯ ಭಾಗಗಳನ್ನು ಗುರುತಿಸಿ ಗ್ರಾಮದ ಅಭಿವೃದ್ಧಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಗುರುತಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ 2024ರ ವೇಳೆಗೆ ವ್ಯವಸ್ಥೆಯು ಸಂಪೂರ್ಣವಾಗಿ ಆಗಲು ಆಯಾ ಸ್ಥಳಗಳನ್ನು ಗುರುತಿಸಿ ನಕ್ಷೆಯ ಮುಖಾಂತರ ಹೇಳಲಾಯಿತು

ಸಭೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಆಚಳ್ಳಿ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಲತಾ ಅಜಡ್ಕ, ಮಂಜುಳಾ ಮುತ್ಲಾಜೆ, ಶಾರದ ಮುತ್ಲಾಜೆ, ಅನಿತಾ ಮೆಟ್ಟಿನಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು, ಒಕ್ಕೂಟದ ಎಂ.ಬಿ.ಕೆ. .ಸಿ.ಆರ್.ಪಿ.ಗಳು, ಗ್ರಂಥಾಲಯ ಮೇಲ್ವಿಚಾರಕಿ, ಗ್ರಾಮ ಪಂಚಾಯತ್ ಚೇರಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

ಗ್ರಾಮ ನೈರ್ಮಲ್ಯ ಐ.ಇ.ಸಿ ಸಂಯೋಜಕರಾದ ಸುರೇಶ್ ಬಾಳಿಲ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದರು. ಸಮುದಾಯ ಸಂಘಟಕರಾದ ಅಭಿಲಾಷ್.ಕೆ.ಎಂ ಹಾಗೂ ಘೋಷಿತ್.ಎನ್.ಜಿ ಸಹಕರಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!