ಜಬಳೆ ಪೈಲಾರು ರಸ್ತೆಯ ಕೋಡ್ತುಗುಳಿ ಎಂಬಲ್ಲಿ ಸೇತುವೆ ಕೆಲಸ ಅರ್ಧದಲ್ಲಿದ್ದು, ಜನರ ಓಡಾಟಕ್ಕೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಅಥವಾ ಇನ್ನಿತರ ಸಮಸ್ಯೆ ಉಂಟಾದಲ್ಲಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಸೇತುವೆಯು ಸೆ.05 ರಂದು ಸುರಿದ ಮಳೆಗೆ ಕೊಚ್ಚಿ ಹೋಗಿದ್ದು, ಸೆ.06 ರಂದು ದೊಡ್ಡತೋಟ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತಾತ್ಕಾಲಿಕ ಅಡಿಕೆ ಮರದ ಪಾಲ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ದೊಡ್ಡತೋಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವೆಂಕಟ್ರಮಣ, ಸದಸ್ಯರಾದ ಪ್ರಸಾದ್ ಶ್ರೇಣಿ, ರಮೇಶ್.ಜಿ, ಪ್ರವೀಣ್.ಜಿ, ಮೋಹನ್.ಜಿ, ಶ್ರೀಧರ, ಲಕೇಶ್ ಈ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು. ಪಾಲ ನಿರ್ಮಿಸಲು ಅಡಿಕೆ ಮರವನ್ನು ಮುರಳೀಧರ ಕೊಡ್ತುಗುಳಿ, ದೇವಿಪ್ರಸಾದ್ ಕೋಡ್ತುಗುಳಿ, ಕೃಷ್ಣಪ್ಪ ಗೌಡ ಕೋಡ್ತುಗುಳಿ ಒದಗಿಸಿಕೊಟ್ಟರು ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟರು. ಸೇವಾ ಕಾರ್ಯದಲ್ಲಿ ಪೈಲಾರು ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಕೋಡ್ತುಗುಳಿ, ಕುಶಾಲಪ್ಪ ಗೋಳಿಯಡಿ, ಕುಶಾಲಪ್ಪ ಮಾಡಬಾಕಿಲು, ಶಿವರಾಮ ಸಹಕರಿಸಿದರು. ದೊಡ್ಡತೋಟ ವಲಯ ಮೇಲ್ವಿಚಾರಕರಾದ ಸೀತಾರಾಮ ಸೀತಾರಾಮ್ ಕಾನಾವು, ಸೇವಾ ಪ್ರತಿನಿಧಿ ದಿವ್ಯಾ ಉಪಸ್ಥಿತರಿದ್ದರು.