
ಕನಕಮಜಲು: ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ.6ರಂದು ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ಪ್ರಥಮ ಹಂತದ ಎಂ. ಜಿ. ಎನ್.ಆರ್.ಜಿ.ಎ. ಸಾಮಾಜಿಕ ಪರಿಶೋಧನೆ ವರದಿ ಮಂಡನೆ ಹಾಗೂ 15ನೇ ಹಣಕಾಸು ಯೋಜನೆಯಡಿ 2021-22ನೇ ಸಾಲಿನ ಸಾಮಾಜಿಕ ಪರಿಶೋಧನೆ ವರದಿ ಮಂಡನೆ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಯಿತು.ಸಭೆಯಲ್ಲಿ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ವಹಿಸಿದ್ದರು. ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ ಶೀತಲ್ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುಕ್ಕುಳಿ, ಸದಸ್ಯರುಗಳಾದ ಶ್ರೀಮತಿ ಶಾರದಾ ಉಗ್ಗಮೂಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಕಾರ್ಯದರ್ಶಿ ರಮೇಶ್, ಸಿಬ್ಬಂದಿ ವರ್ಗ ಶ್ರೀಮತಿ ಪ್ರಮೀಳಾ, ತಾಂತ್ರಿಕ ಸಹಾಯಕರು ತಾಲೂಕು ಪಂಚಾಯತ್ ಸುಳ್ಯ ಹಾಗೂ ನರೇಗಾ ಯೋಜನೆಯ ಪಲಾನುಭವಿಗಳು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿ ವಂದಿಸಿದರು.