
ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ವ್ಯಕ್ತಿ ಜೀವಂತ ದಹನವಾಗಿದ ಘಟನೆಯೊಂದು ಇಂದು ಬೆಳಿಗ್ಗೆ ಐವರ್ನಾಡಿನ ಪರ್ಲಿಕಜೆ ಎಂಬಲ್ಲಿ ಸಂಭವಿಸಿದೆ. ಸುಧಾಕರ ಎಂಬವರು ಅನಾರೋಗ್ಯದಿಂದಿದ್ದು ಮನೆಯಲ್ಲಿ ಮಲಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಮನೆಯ ಒಂದು ಭಾಗ ಸುಟ್ಟು ಹೋಗಿದೆ. ಮನೆಯೊಳಗಿದ್ದ ಸುಧಾಕರ ಅವರಿಗೆ ಹೊರಹೋಗಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.