
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಸಬಲೀಕರಣ ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಗುತ್ತಿಗಾರು ,ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ )ಗುತ್ತಿಗಾರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ದಸರಾ ಕ್ರೀಡಾಕೂಟ 2022-23ರಲ್ಲಿ ಕುಮಾರಿ ಪ್ರಜ್ಞಾ ಪಿ .ಆರ್ ಪೀರನಮನೆ ಇವರು ಭಾಗವಹಿಸಿ 800 ಮೀಟರ್ ಪ್ರಥಮ ,1500 ಮೀಟರ್ ಹಾಗೂ 3000 ಮೀಟರ್ ತೃತೀಯ , 4×100 ರಿಲೇ ಪ್ರಥಮ,4×400 ರಿಲೇ ದ್ವಿತೀಯ ಹಾಗೂ ವಾಲಿಬಾಲ್ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಅದಲ್ಲದೆ ಇವರು ಶನಿವಾರ ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ, ಇವರು ಪೀರನ ಮನೆ ರಾಮಚಂದ್ರ ಹಾಗೂ ಚಿನ್ನಮ್ಮ ದಂಪತಿಗಳ ಪುತ್ರಿ.