Ad Widget

ಗುತ್ತಿಗಾರು ವಲಯದ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಗುತ್ತಿಗಾರು, ವಳಲಂಬೆ, ಕಮಿಲ-ಮೊಗ್ರ-ಬಳ್ಳಕ್ಕ ಕಂದ್ರಪ್ಪಾಡಿ, ದೇವ, ಮಾವಿನಕಟ್ಟೆ ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ ಕೆ ಬೆಳ್ಯಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ನ ಸದಸ್ಯರಾದ ವೆಂಕಟ್ ವಳಲಂಬೆ ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿ, ಈ ಪ್ರದೇಶಕ್ಕೆ ಯೋಜನೆಯು ಬರುವ ಮೊದಲು ಜನರ ಮತ್ತು ಗ್ರಾಮದ ಪರಿಸ್ಥಿತಿ ಬಗ್ಗೆ, ಯೋಜನೆ ಬಂದ ನಂತರದ ಆಗಿರುವ ಅಭಿವೃದ್ಧಿ ಮತ್ತು ಬದಲಾವಣೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಆರು ಒಕ್ಕೂಟಗಳ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ 2 ರ ಶ್ರೀ. ಕ್ಷೇ. ಧ. ಗ್ರಾ ಯೋಜನೆ ಬಿ ಸಿ ಟ್ರಸ್ಟ್ (ರಿ) ನ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಸರ್ ರವರು ಜವಾಬ್ದಾರಿ ಮತ್ತು ದಾಖಲಾತಿಗಳನ್ನು ಹಸ್ತಾಂತರ ಮಾಡಿ ಮಾತನಾಡಿ ಧರ್ಮಸ್ಥಳ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ, ಈಗಾಗಲೇ ಅವುಗಳ ಪ್ರಯೋಜನವನ್ನು ಪಾಲುದಾರರು ಪಡೆದುಕೊಂಡಿರುವ ಬಗ್ಗೆ, ಪದಾಧಿಕಾರಿಗಳು ತಳಮಟ್ಟದಲ್ಲಿ ರೈತರಿಗೆ ಕೂಡ ಸೇವೆಯನ್ನು ಕೊಡುವ ಜವಾಬ್ದಾರಿಯನ್ನು ಪಡೆದುಕೊಳ್ಳುವ ಬಗ್ಗೆ, ಗ್ರಾಮಕ್ಕೆ ಕುಟುಂಬಗಳಿಗೆ ಅವಶ್ಯಕತೆ ಇರುವ ಮೂಲಸೌಕರ್ಯಗಳ ಪಡೆಯುವ ಬಗ್ಗೆ, ಅರೋಗ್ಯಕ್ಕೆ ಉಳಿತಾಯಕ್ಕೆ ಮತ್ತು ಭದ್ರತೆ ದೃಷ್ಟಿಯಿಂದ ವಿವಿಧ ವಿಮಾ ಸೌಲಭ್ಯಗಳ ಬಗ್ಗೆ, ಕುಟುಂಬ ಅಭಿವೃದ್ಧಿಯೊಂದಿಗೆ ಮನಪರಿವರ್ತನೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಎರ್ದಡ್ಕ, ದೇವಚಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ದೇವರವರು ಈ ಕಾರ್ಯಕ್ರಮದಲ್ಲಿ ಶುಭಾಕೋರಿದರು. ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರುಗಳು ಮತ್ತು ನೂತನ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಕ್ಕೂಟಗಳ ಸದಸ್ಯರ ಪ್ರಸ್ತುತ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ನಾಟಿ ವೈದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

. . . . . .

ಒಬ್ಬ ವಿದ್ಯಾರ್ಥಿಗೆ ಶಿಷ್ಯವೇತನ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಎಲ್ಲಾ ಒಕ್ಕೂಟಗಳ ನಿಕಟಪೂರ್ವ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಊರಿನ ಗಣ್ಯರು, ದೇವಸ್ಥಾನ ಆಡಳಿತ ಸಮಿತಿ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಜನಜಾಗೃತಿ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಒಕ್ಕೂಟಗಳ ಎಲ್ಲಾ ಸದಸ್ಯರುಗಳು, ಗುತ್ತಿಗಾರು ವಲಯದ ಮೇಲ್ವಿಚಾರಕರು, ವಲಯದ ಎಲ್ಲಾ ಸೇವಾಪ್ರತಿನಿಧಿಯವರು ಭಾಗವಹಿಸಿದರು. ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಲೋಕೇಶ್ವರ್ ಡಿ ಆರ್ ವರದಿ ವಾಚನ ಮಾಡಿದರು, ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಕಂದ್ರಪ್ಪಾಡಿ ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ ವಂದಿಸಿದರು, ನಾಲ್ಕೂರು ಸೇವಾಪ್ರತಿನಿಧಿ ಕಾರ್ಯನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!