ಶಿಕ್ಷಕರೇ ದೇಶದ ನಿರ್ಮಾಪಕರು ರೈತ ಹೇಗೆ ದೇಶದ ಬೆನ್ನೆಲುಬು ಹಾಗೆ ಶಿಕ್ಷಕರು ಸಹ ದೇಶದ ಬೆನ್ನೆಲುಬು ಒಂದು ದೇಶವು ನಿರ್ಮಾಣವಾಗಬೇಕಾದರೆ ಅಲ್ಲಿನ ಪ್ರಜೆಗಳ ನಿರ್ಮಾಣವಾಗಬೇಕು ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಬಲಿಷ್ಟ ದೇಶವಾಗಿ ಶ್ರಮಿಸಬೇಕಾದ ಮೊದಲ ವರ್ಗವೆಂದರೆ ಮಾತಾಪಿತರ ವರ್ಗ ಎರಡನೆಯದು ಶಿಕ್ಷಕ ವರ್ಗ, ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆ ತಾಯಿಗಳಿಂದ ಆಗದ ಕೆಲವು ಅಂಶಗಳು ಶಿಕ್ಷಕರಿಂದ ಸಾಧ್ಯವಾಗುತ್ತದೆ.
ಮಕ್ಕಳಿಗೆ ಮೊದಲ ಗುರು ತನ್ನ ತಾಯಿ, ನಂತರದ ಸ್ಥಾನ ಗುರುಗಳೇ, ಶಿಕ್ಷಕ ವೃತ್ತಿ ಎನ್ನುವುದು ಒಂದು ಪವಿತ್ರವಾದ ಕೆಲಸ ವಿದ್ಯಾರ್ಥಿಗಳು ಮಾಡಿದ ತಪ್ಪನ್ನು ಕ್ಷಮಿಸಿ ಅವರನ್ನು ಒಂದು ದೇಶದ ಉನ್ನತ ಪ್ರಜೆಯಾಗಿ ಬೆಳೆಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಶಿಕ್ಷಕರ ಜವಾಬ್ದಾರಿ ಎಷ್ಟು ದೊಡ್ಡದು ಅವರ ಸಮಸ್ಯೆಗಳು ಕೂಡ ಅಷ್ಟೇ ದೊಡ್ಡವು ಉದಾಹರಣೆಗೆ ಶಿಲ್ಪಿ ಕಲ್ಲನ್ನು ಕೆತ್ತಿ ಒಂದು ಸುಂದರವಾದ ಮೂರ್ತಿ ತಯಾರು ಮಾಡುವುದಕ್ಕೆ ತುಂಬಾ ಶ್ರಮ ಪಡಬೇಕಾಗುತ್ತದೆ ಹಾಗೆಯೇ ವಿದ್ಯಾರ್ಥಿಗಳ ಸರ್ವ ಬೆಳವಣಿಗೆಗೆ ಶ್ರಮಿಸುವ ಕೆಲಸವನ್ನು ಶಿಕ್ಷಕರು ಮಾತ್ರ ಮಾಡಲು ಸಾಧ್ಯ ವಿದ್ಯಾರ್ಥಿ ಸಮೂಹವನ್ನು ಆಟ ಪಾಠಗಳ ಮೂಲಕ, ಚಂಚಲ ಚಿತ್ತದ ವಿದ್ಯಾರ್ಥಿಯರಿಗೆ ಬುದ್ಧಿ ಹೇಳಿ ತಿಳಿಸಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡಲು ಶಿಕ್ಷಕರಿಗೆ ಮಾತ್ರ ಸಾಧ್ಯ
ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸೂಕ್ತವಾದ ಪ್ರತಿಭೆಯನ್ನು ಸಂಪೂರ್ಣ ಶಕ್ತಿಯನ್ನು ಹೊರಗಿಲೆಯುವುದೇ ಶಿಕ್ಷಣದ ಸಾರ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಗುರುತಿಸಿ ಆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡುವುದು ಶಿಕ್ಷಕರ ಪರಮ ಕರ್ತವ್ಯವಾಗಿರುತ್ತದೆ ಪ್ರತಿಭಾ ಶೋದನೆಯಿಂದ ಮಾತ್ರ ಆರೋಗ್ಯಯುತ ಸಮಾಜಕ್ಕೆ ಬೇಕಾದ ಎಲ್ಲಾ ತರಹದ ವ್ಯಕ್ತಿಗಳನ್ನು ಶಿಕ್ಷಕ ಸಮಾಜಕ್ಕೆ ನೀಡಬಲ್ಲ
ಶಾಲೆ ಎನ್ನುವುದು ಒಂದು ದೇವಾಲಯವಿದ್ದಂತೆ ಏಕೆಂದರೆ ಅದರ ಪರಿಸರವು ಶಿಸ್ತಿನಿಂದ ಹಾಗೂ ಸ್ವಚ್ಛತೆಯಿಂದ ಕಂಗೊಳಿಸುತ್ತಿರಬೇಕು ಈ ಕೆಲಸವನ್ನು ಶಿಕ್ಷಕ ಮಾತ್ರ ಚೆನ್ನಾಗಿ ಮೂಡಿಸಬಲ್ಲ ಒಂದು ಪ್ರಜ್ವಲಿಸುವ ದೀಪ ಮಾತ್ರ ಇನ್ನೊಂದು ದೀಪವನ್ನು ಬೆಳಗಿಸಲು ಸಾಧ್ಯ ಏಕೆಂದರೆ ಶಿಕ್ಷಕ ಮಾತ್ರ ಉತ್ತಮ ವ್ಯಕ್ತಿಯನ್ನು ಸಮಾಜಕ್ಕೆ ನೀಡಲು ಸಾಧ್ಯ ನನಗೆ ಅರಿವಾದ ಹಾಗೆ ಶಿಕ್ಷಕರ ಸದಾ ಪುಸ್ತಕ ಪ್ರೇಮಿ ಆಗಿರುತ್ತಾರೆ. ಶಿಕ್ಷಕ ವೃಂದದವರು ಸೋಮಾರಿಗಳಾಗದೆ ಕ್ರಿಯಾಶೀಲರಾಗಬೇಕು ಶಿಕ್ಷಕರು ಒಳ್ಳೆಯ ನಿಷ್ಠಾವಂತ ಶಿಕ್ಷಕನಾದರೆ ಮಾತ್ರ ತನ್ನ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಯಾವುದೇ ಕೆಟ್ಟ ಕೆಲಸಗಳಲ್ಲಿ ಭಾಗಿಯಾಗದಾಗೆ ಹಾಗೆ ನೋಡಿಕೊಳ್ಳಲು ಸಾಧ್ಯ
ಬದುಕನ್ನು ಕಟ್ಟಿಕೊಳ್ಳಬೇಕಾದ ಜೀವನ ತತ್ವಗಳು, ಜೀವನ ಸಂದೇಶಗಳು ಮೈಗೂಡಿಸಿಕೊಳ್ಳಲು ಕಲಿಸುವ ಕಲಾವಿದ ಬರೀ ಶ್ವಾಸವಿರುವ ಮಕ್ಕಳಿಗೆ ಆತ್ಮ ವಿಶ್ವಾಸವನ್ನು ಮೂಡಿಸುತ್ತಾನೆ ವಿದ್ಯಾರ್ಥಿಗಳಿಗೆ ಮನಸ್ಸಿಗೆ ಮುಟ್ಟುವಂತೆ ಪಾಠ ಮಾಡುವುದು ಶಿಕ್ಷಕನ ಅತ್ಯಂತ ಪ್ರಮುಖ ಕರ್ತವ್ಯವಾಗಿದೆ ತನ್ನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಸಹಾಯವನ್ನು ಮಾಡೋದು ಶಿಕ್ಷಕರ ಪ್ರಮುಖ ಕಾರ್ಯವಾಗಿದೆ
ಶಿಕ್ಷಕನು ಒಬ್ಬ ಮಹಾನ್ ಜ್ಞಾನಿ ವಿದ್ಯಾರ್ಥಿಗಳು ಬದುಕಲು ದಾರಿ ತೋರಿಸುವ ದಾರಿ ದೀಪ ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳ ಬದುಕಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಶಿಕ್ಷಣವನ್ನು ನೀಡಲು ಶಿಕ್ಷಕ ಅಷ್ಟೇ ಪಾತ್ರ ವಹಿಸುತ್ತಾನೆ ನಾವು ಉತ್ತಮ ಪ್ರಜೆಯಾಗಿ ಒಳ್ಳೆಯ ವೃತ್ತಿಯಲ್ಲಿರುವಾಗ ನಮಗೆ ಪಾಠ ಮಾಡಿದ ಶಿಕ್ಷಕರು ನೆನಪಾಗುತ್ತಾರೆ ಶಿಕ್ಷಕರು ದೇವರ ಸ್ವರೂಪ ಹೊಂದಿರುತ್ತಾರೆ ಎಲ್ಲಾ ಶಿಕ್ಷಕರ ಮುಂದಿನ ಜೀವನವು ಉಜ್ವಲವಾಗಿರಲಿ ಎಂದು ಆಶಿಸೋಣ.
ನಿಕ್ಷಿತ್
ಸರಕಾರಿ ಪದವಿ ಪೂರ್ವ ಕಾಲೇಜು, ಐವರ್ನಾಡು