ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಪ.ಪೂ ಶಿಕ್ಷಣ ಇಲಾಖೆ ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಸುಳ್ಯ ಎನ್ನೆಂಪಿಯುಸಿಯಲ್ಲಿ ಸೆ.03 ರಂದು ನಡೆಯಿತು.
ಸುಳ್ಯ ಎನ್ನೆಂಪಿಯುಸಿಯ ಪ್ರಾಂಶುಪಾಲರಾದ ಪ್ರೊ ರುದ್ರ ಕುಮಾರ್ ಅವರು ಪಂದ್ಯಾಟದ ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಗಿದ್ದಾಗ ಮಾತ್ರ ಕಲಿಕೆಯಲ್ಲಿ ಬದಲಾವಣೆ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು “ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದು. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ಬುದ್ಧಿ ಮಟ್ಟ ಚುರುಕು ಎಂದು ಹೇಳಲಾಗುತ್ತದೆ, ದೃಢರಾಗುತ್ತೇವೆ.ಹಾಗಾಗಿ ಕ್ರೀಡೆಯಲ್ಲಿ ಶ್ರದ್ಧೆಯಿಂದ ಭಾಗವಹಿಸಿ” ಎಂದು. ವೇದಿಕೆಯಲ್ಲಿ ಎನ್ನೆಂಪಿಯುಸಿ ಆರಂತೋಡು ಇಲ್ಲಿನ ದೈಶಿ ನಿರ್ದೇಶಕರು ಹಾಗೂ ತಾಲೂಕು ಕ್ರೀಡಾ ಸಂಯೋಜಕಿ ಶಾಂತಿ ಎ.ಕೆ, ಸುಳ್ಯ ಎನ್ನೆಂಪಿಯುಸಿಯ ಕ್ರೀಡಾ ತರಬೇತುದಾರರಾದ ನಾಗರಾಜ್ ನಾಯ್ಕ ಭಟ್ಕಳ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ, ಸಾವಿತ್ರಿ.ಕೆ ಮುಂತಾದವರು.ವಿದ್ಯಾರ್ಥಿನಿಯರಾದ ನಿಶ್ಚಿತ ಬಳಗದವರು ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕರಾದ ವಿನಯ್ ನಿಡ್ಯಮಲೆ ಸ್ವಾಗತಿಸಿ, ಉಪನ್ಯಾಸಕರಾದ ರೇಷ್ಮಾ ಎಂ ಎಂ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಹರ್ಷಿತಾ ಎ.ಬಿ ವಂದಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರಾದ ಶಾಂತಿ, ಎನ್ನೆಂಪಿಯುಸಿ ಕ್ರೀಡಾ ತರಬೇತುದಾರ ನಾಗರಾಜ್ ನಾಯ್ಕ್ ಭಟ್ಕಳ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ ಉಪಸ್ಥಿತರಿದ್ದರು.ವಿಜೇತರ ಪಟ್ಟಿಯನ್ನು ಉಪನ್ಯಾಸಕ ವಿನಯ್ ನಿಡ್ಯಮಲೆ ವಾಚಿಸಿದರು.
ಬಾಲಕರ ವಿಭಾಗದಲ್ಲಿ ಎನ್ನೆಂಪಿಯುಸಿ ಅರಂತೋಡು ಪ್ರಥಮ ಸ್ಥಾನ ಹಾಗೂ ಎನ್ನೆಂಪಿಯುಸಿ ಸುಳ್ಯ ದ್ವಿತೀಯ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಶಾರದಾ ಮಹಿಳಾ ಪ.ಪೂ ಕಾಲೇಜು ಪ್ರಥಮ ಸ್ಥಾನ ಹಾಗೂ ಎನ್ನೆಂಪಿಯುಸಿ ಸುಳ್ಯ ದ್ವಿತೀಯ ಸ್ಥಾನ ಪಡೆದುಕೊಂಡಿತು.