
ಬೆಂಗಳೂರಿನ ರೇಣುಕಾಂಬ ಸ್ಟುಡಿಯೊ ಮಲ್ಲೇಶ್ವರಂ ನಲ್ಲಿ ಖ್ಯಾತ ನಿರ್ದೇಶಕರಾದ ಜಿ ವಿ ಅಯ್ಯರ್ ರವರ ಪುತ್ರ ಜಿ ವಿ ರಾಘವೇಂದ್ರ ಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆಯಾಯಿತು.ಮುಖ್ಯ ಪಾತ್ರದಲ್ಲಿ ಡ್ರಾಮಾ ಜೂನಿಯರ್ ತುಷಾರ್ ಗೌಡ, ತಂದೆಯ ಪಾತ್ರದಲ್ಲಿ ರಾಜೇಶ್ ಕೃಷ್ಣನ್, ತಾಯಿಯ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸುತ್ತಿದ್ದಾರೆ. ಹಾಗೂ ಚಿತ್ರದಲ್ಲಿ ಡ್ರಾಮಾ ಜೂನಿಯರ್ ಮಹೇಂದ್ರ, ಕಾಮಿಡಿ ಕಿಲಾಡಿ ಅನೀಶ್ ಇವರು ನಟಿಸುತ್ತಿದ್ದು ಈ ಚಲನಚಿತ್ರವು ಸೆ. 23 ರಂದು ತೆರೆಗೆ ಬರಲಿದೆ.