Ad Widget

ಕಲ್ಮಕಾರು :- ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಪಂಜ-ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಮಕಾರು “ಎ” ಮತ್ತು ಕಲ್ಮಕಾರು “ಬಿ” ಒಕ್ಕೂಟಗಳ ಪದಗ್ರಹಣ ಸಮಾರಂಭವು ಆ.04 ರಂದು ದ.ಕ.ಉ.ಹಿ ಪ್ರಾಥಮಿಕ ಶಾಲಾ ವಠಾರ ಕಲ್ಮಕಾರು ಇಲ್ಲಿ ನಡೆಯಿತು.

. . . . . . . . .

ಪ್ರಗತಿಪರ ಕೃಷಿಕರು ಹಾಗೂ ಯುವ ನ್ಯಾಯವಾದಿಗಳಾದ ಗುರುಚರಣ್.ಕೆ.ಎಸ್ ಕೊಪ್ಪಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾದ ಪುಷ್ಪರಾಜ್.ಪಿ.ಎಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಉ.ಹಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಾಲಿನಿ ಅವರು ಉಪಸ್ಥಿತರಿದ್ದರು. ಕಲ್ಮಕಾರು “ಎ” ಮತ್ತು “ಬಿ” ಒಕ್ಕೂಟಗಳ ನೂತನ ಅಧ್ಯಕ್ಷರುಗಳಾದ ಶೇಷಪ್ಪ ಗೌಡ ಹಾಗೂ ರಾಮಣ್ಣ ಗೌಡ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಕೃಷಿ ಅಧಿಕಾರಿಗಳಾದ ರಮೇಶ್ ಅವರು ನೂತನ ಒಕ್ಕೂಟಗಳ ಜವಬ್ದಾರಿ ಹಸ್ತಾಂತರ ಮಾಡಿದರು. ಸೇವಾಪ್ರತಿನಿಧಿ ಪದ್ಮಾವತಿ ಅವರು ವರದಿ ಮಂಡನೆ ಮಾಡಿದರು.ಈ ಸಂದರ್ಭದಲ್ಲಿ ಈ ಹಿಂದೆ ಸುಬ್ರಹ್ಮಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸಿ ದೊಡ್ಡತೋಟ ವಲಯಕ್ಕೆ ವರ್ಗಾವಣೆ ಆದ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಅವರನ್ನು ಸನ್ಮಾನಿಸಲಾಯಿತು.

. . . . . . .

ಹಾಗೂ ಕಲ್ಮಕಾರಿನಲ್ಲಿ ಕರ್ತವ್ಯ ನಿರ್ವಹಿಸಿ ಕೊಲ್ಲಮೊಗ್ರಕ್ಕೆ ವರ್ಗಾವಣೆ ಆದ ಸೇವಾಪ್ರತಿನಿಧಿ ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣ.ಕೆ ಸ್ವಾಗತಿಸಿ ವೆಂಕಟರಮಣ ಅವರು ಧನ್ಯವಾದ ಸಮರ್ಪಿಸಿದರು. ವಲಯ ಮೇಲ್ವಿಚಾರಕರಾದ ರಾಜೇಶ್.ಕೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳು, ಪ್ರಗತಿಬಂಧು ಸಂಘಗಳ ಒಕ್ಕೂಟ ಕಲ್ಮಕಾರು “ಎ” ಮತ್ತು “ಬಿ” ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading