ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ) ಕೊಲ್ಲಮೊಗ್ರ ಇದರ ವತಿಯಿಂದ ಇಂದು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ”ದಿ.ಚಂದ್ರಶೇಖರ ನಂಗಾರು ಅವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ” ವನ್ನು ಹಮ್ಮಿಕೊಳ್ಳಲಾಯಿತು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ದೀಪ ಬೆಳಗುವುದಾರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮನುಷ್ಯರು ಮಾಡುವ ದಾನಗಳಲ್ಲಿ ಶ್ರೇಷ್ಠವಾದ ದಾನವು ರಕ್ತದಾನವಾಗಿದ್ದು ಇಂತಹ ಶಿಬಿರವನ್ನು ಅಯೋಜಿಸಿದ ಸಮಿತಿಗೆ ಧನ್ಯವಾದಗಳನ್ನು ತಿಳಿಸಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಸಭಾಪತಿಯಾದ ಪಿ.ಬಿ. ಸುಧಾಕರ್ ರೈ ಮಾತನಾಡಿ ನೆರೆಯಿಂದ ಕುಗ್ಗಿ ಹೋದ ಈ ಗ್ರಾಮಗಳಲ್ಲಿ ಯುವಕರ ಈ ರಕ್ತದಾನ ಶಿಬಿರವು ನಮ್ಮ ತಾಲೂಕಿಗೆ ಪ್ರೇರಣೆಯಾದಂತಗಿದೆ. ರಕ್ತದಾನದಿಂದ ಅದೆಷ್ಟೋ ಜೀವಗಳನ್ನು ಉಳಿಸಬಹುದಾಗಿದೆ ಎಂದು ವಿವರಿಸಿದರು.ಯುವ ಸಮೂಹ ಇಂತಹ ಶಿಬಿರಗಳಿಗೆ ಒತ್ತು ನೀಡಿ ಶ್ರೇಷ್ಠ ದಾನವಾದ ರಕ್ತದಾನ ಶಿಬಿರಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಕೇಳಿಕೊಂಡರು.
ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನೆರೆ ಪ್ರವಾಹಕ್ಕೆ ತುತ್ತದ ಸಂತ್ರಸ್ತರಿಗೆ ಟರ್ಪಾಲ್ ಮತ್ತು ಸಮಿತಿಗೆ ಮೂರು ಸಾವಿರ ರೂಪಾಯಿಯ ಚೆಕ್ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಹೇಮಂತ್ ದೋಲನ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಆಶೋಕ್ ಕುಮಾರ, ಕೊಲ್ಲಮೊಗ್ರ ಗ್ರಾ.ಪಂ ಅಧ್ಯಕ್ಷರಾದ ಉದಯ ಕೊಪ್ಪಡ್ಕ,ಹಾಗೂ ಅಮರ ತಾಲೂಕು ಚಾರಿಟೇಬಲ್ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ವೇದಿಕೆಯಲ್ಲಿದ್ದರು. ಸುಮಾರು ನೂರರಷ್ಟು ದಾನಿಗಳು ಈ ಶಿಬಿರದಲ್ಲಿ ಪಾಲ್ಗೊಂಡರು. ಹರಿಪ್ರಸಾದ್ ಮಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.ಪುಷ್ಪರಾಜ್ ಪಡ್ಪು ವಂದಿಸಿದರು.
- Thursday
- November 21st, 2024