
ಪಯಸ್ವಿನಿ ಜೇಸಿಐ ಸುಳ್ಯ ವತಿಯಿಂದ ಸೆ.9 ರಿಂದ ಸೆ.15ರ ವರೆಗೆ ನಡೆಯಲಿರುವ ನಮಸ್ತೆ ಜೆಸಿಐ ಸಪ್ತಾಹ 2022ರ ಕಾರ್ಯಕ್ರಮದ ಕುರಿತು ಸೆ. 3ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೆಸಿ ಹೆಚ್ ಜಿ ಎಫ್ ರಂಜಿತ್ ಕುಕ್ಕೇಟ್ಟಿ ಮಾತನಾಡಿ, ನಮಸ್ತೆ ಜೆಸಿಐ ಸಪ್ತಾಹ 2022 ಕಾರ್ಯಕ್ರಮ ಏಳು ದಿನ ನಡೆಯಲಿದೆ ಸೆ. 9 ರಂದು ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ ಜೇಸಿಐ ಸಪ್ತಾಹ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.ಸೆ. 10 ರಂದು ಶೇಣಿ ಅಂಗನವಾಡಿ ಕೇಂದ್ರ ಅಮರಪಡ್ನೂರಿನಲ್ಲಿ ಪೀಠೋಪಕರಣಗಳ ವಿತರಣೆ ಹಾಗೂ ಮಕ್ಕಳಿಗೆ ಮತ್ತು ಪೋಷಕರಿಗೆ ಸ್ಪರ್ಧೆ ನಡೆಯಲಿದೆ.ಸೆ. 11 ರಂದು ಸುಳ್ಯದ ಶ್ರೀರಾಂಪೇಟೆಯ ಕಾನತ್ತಿಲ ದೇವಮ್ಮ ಸಂಕೀರ್ಣ ದಲ್ಲಿ ಪದವಿ ಪೂರ್ವ ಮತ್ತು ಪದವಿ ವಿಭಾಗ ಪ್ರತ್ಯೇಕ ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ಧೆ ಹಾಗೂ ಸುಳ್ಯದ ಕುರುಂಜಿಬಾಗ್ ಬಿ ಸಿ ಯಂ ಹಾಸ್ಟೆಲ್ ನಲ್ಲಿ ನಾಯಕತ್ವ ತರಬೇತಿ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ ಮಾಹಿತಿ ಕಾರ್ಯಾಗಾರ ನಡೆಯಲಿದೆ.ಸೆ. 12ರಂದು ಪ್ರಾ.ಕೃ.ಸಹಕಾರಿ ಸಂಘ ಮಂಡೆಕೋಲಿನಲ್ಲಿ ಸಾಬೂನು ಹಾಗೂ ಫಿನಾಯಿಲ್ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಹಿಳೆಯರಲ್ಲಿ ನಾಯಕತ್ವ ತರಬೇತಿ ನಡೆಯಲಿದೆ.ಸೆ.13ರಂದು ಸ.ಹಿ.ಪ್ರಾ.ಶಾಲೆ ಉಬರಡ್ಕ ಮಿತ್ತೂರಿನಲ್ಲಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನಡೆಯಲಿದೆ. ಸೆ.14 ರಂದು ಅಂಗನವಾಡಿ ಶಾಲೆ ಕಾಯರ್ತೋಡಿಯಲ್ಲಿ ಬಾಲವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಕಾಯರ್ತೋಡಿ ಜಂಟಿಯಾಗಿ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಬಿ ಸಿ ಯಂ ಹಾಸ್ಟೆಲ್ ಎಲಿಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ತಪಾಸಣೆ ನಡೆಯಲಿದೆ.ಸೆ. 15 ರಂದು ಸುಳ್ಯದ ಶ್ರೀರಾಂಪೇಟೆಯ ಕಾನತ್ತಿಲ ದೇವಮ್ಮ ಸಂಕೀರ್ಣ ದಿಲ್ಲಿ ಕಮಲಪತ್ರ, ಪಯಶ್ವಿನಿಶ್ರೀ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ ಮತ್ತು ಕುಟುಂಬ ಸಮ್ಮಿಲನ ನಡೆಯಲಿದೆಎಂದು ಹೇಳಿದರು.ವೇದಿಕೆಯಲ್ಲಿ ಜೆಸಿ ದೇವರಾಜ್ ಕುದ್ಪಾಜೆ, ಜೆಸಿ ನವಿನ್ ಕುಮಾರ್, ಜೆಸಿ ಶೋಭಾ ಅಶೋಕ್ ಚೂಂತಾರು, ಜೆಸಿ ಲತಾ ಸುಪ್ರೀತ್ ಮೋಂಟಡ್ಕ, ಜೆಸಿ ಅನಿಲ್ ಕುಮಾರ್ ಬಳ್ಳಡ್ಕ, ಜೆಸಿ ಅಶೋಕ್ ಚೂಂತಾರು ಉಪಸ್ಥಿತರಿದ್ದರು.