ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಆ.30 ಮಂಗಳವಾರದಿಂದ ಸೆ.01 ಗುರುವಾರದ ವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಕಾರದೊಂದಿಗೆ 13ನೇ ವರ್ಷದ ಗಣೇಶೋತ್ಸವ ನಡೆಯಿತು. ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಆ.30 ಮಂಗಳವಾರದಂದು ಬೆಳಿಗ್ಗೆ ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ಸಂಜೆ ಶ್ರೀ ದೇವಿ ಭಜನಾ ಮಂಡಳಿ ಬಾಳುಗೋಡು ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಿತು. ಆ.31 ಬುಧವಾರದಂದು ಪೂರ್ವಾಹ್ನ ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಂತರ ಶ್ರೀ ಗಣಪತಿ ಪೂಜೆ, ಮದ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಕುಕ್ಕೇಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ ಹಾಗೂ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಇವರಿಂದ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ನಡೆಯಿತು. ರಾತ್ರಿ ಮಹಾಪೂಜೆ ನಡೆಯಿತು. ಆ.01 ಗುರುವಾರದಂದು ಬೆಳಿಗ್ಗೆ ಚತುರ್ನಾಳಿಕೇರ ಗಣಪತಿ ಹವನ, ಮದ್ಯಾಹ್ನ ಪೂರ್ಣಾಹುತಿ ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ಗೌರಿ ಮತ್ತು ಗಣೇಶ ದೇವರ ಮೆರವಣಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಐನೆಕಿದು, ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ ಶ್ರೀ ಗೌರಿ ಮತ್ತು ಗಣೇಶ ದೇವರ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ವರದಿ :- ಉಲ್ಲಾಸ್ ಕಜ್ಜೋಡಿ