ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆ.31 ರಿಂದ ಸೆ.4 ರ ವರೆಗೆ ಸುಳ್ಯ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ದೇವತಾರಾಧನಾ ಸಮಿತಿ ಇವುಗಳ ಆಶ್ರಯದಲ್ಲಿ 54 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ಪುರೋಹಿತ್ ಆದಿನಾರಾಯಣ ರವರ ನೇತೃತ್ವದಲ್ಲಿ ಗಣಪತಿ ಹವನ ನಡೆದು ಗಣಪತಿ ಮೂರ್ತಿಯ ಪ್ರತಿಷ್ಠೆ ನೆರವೇರಿಸಲಾಯಿತು.
ನಂತರ ಸ್ವಾತಂತ್ರ್ಯ ವೀರ ಸಾವರ್ಕರ್ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಉತ್ಸವಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಸಾ.ದೇ.ಸ. ಅಧ್ಯಕ್ಷ ಸೋಮನಾಥ ಕೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಭಾರತ್ ಆಗ್ರೋ ಸರ್ವೀಸ್ ಮತ್ತು ಸಪ್ರೈಸ್ ಇದರ ಮಾಲಕರಾದ ರೋ| ಪಿ.ರಾಮಚಂದ್ರ, ಸಾ.ದೇ.ಸ.ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ವೈಷ್ಣವಿ ಪ್ರಾರ್ಥಿಸಿದರು. ಸಾ.ದೇ.ಸ.ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ ಕೊಯಿಕುಳಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಜಂಟಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.