ಸುಳ್ಯ ತಾಲೂಕಿನ ತಂಟೆಪ್ಪಾಡಿ ಮನೆಯಲ್ಲಿ ಆ.31ರಂದು ಖ್ಯಾತ ಯಕ್ಷಗಾನ ಮದ್ದಳೆ ಕಲಾವಿದರಾದ ತಂಟೆಪ್ಪಾಡಿ ಶಂಭಟರ ನೆನಪಿನ ಗ್ರಂಥ ಬಿಡುಗಡೆ ಸಮಾರಂಭ ಜರುಗಿತು.
ಈ ನೆನಪಿನ ಗ್ರಂಥವನ್ನು ಹಿರಿಯ ಸಾಹಿತಿ ಮತ್ತು ಖ್ಯಾತ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿ ಇವರು ಲೋಕಾರ್ಪಣೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಲಾ ಪೋಷಕರು ಹಾಗೂ ಹವ್ಯಕ ವಿಭಾಗದ ಗುರಿಕಾರರಾಗಿರುವ ಶ್ರೀ ಮುಂಡುಗಾರು ಸುಬ್ರಮಣ್ಯ ಅವರು ವಹಿಸಿದ್ದರು.
ಕೃತಿಯ ಸಂಪಾದಕರಾದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಾಮಕೃಷ್ಣ ಭಟ್ ಚೂಂತಾರು ಅವರು ಪ್ರಾಸ್ತಾವಿಕ ಮಾತನಾಡಿದರು. ಪುಸ್ತಕದ ತಯಾರಿ ಔಚಿತ್ಯ ಮತ್ತು ಸಿದ್ಧತೆಗಳ ಬಗ್ಗೆ ತಂಟೆಪ್ಪಾಡಿ ಶಿವರಾಮ ಭಟ್ ಅವರು ತಿಳಿಸಿದರು. ಶ್ಯಾಮ ಭಟ್ ತಂಟೆಪ್ಪಾಡಿ ಸ್ವಾಗತಿಸಿ. ಶ್ರೀಮತಿ ಶ್ರೀ ದೇವಿ ವಂದಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಪಿ. ಎಸ್ ಭಟ್ ಕಾಯರ ಅವರು ನಿರ್ವಹಿಸಿದರು. ಡಾ|| ಮುರಲೀ ಮೋಹನ್ ಚೂಂತಾರು ಅವರ ಸಾರಥ್ಯದ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಮೂಲಕ ಈ ಪುಸ್ತಕ ಪ್ರಕಾಶನಗೊಂಡಿದೆ.
ಸಮಾರಂಭದಲ್ಲಿ ಶಿವರಾಂ ಭಟ್ಟ ದಂಪತಿಗಳು ಮತ್ತು ಸೀತಾರಾಂ ಹುಟ್ಟು ದಂಪತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.