Ad Widget

ಸಂಪಾಜೆ: 28 ನೇ ವರ್ಷದ ಗೌರಿ ಗಣೇಶೋತ್ಸವ

ಸಂಪಾಜೆ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭವನದಲ್ಲಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸಂಪಾಜೆ ಹಾಗೂ ಪಯಸ್ವಿನಿ ಯುವಕ ಸಂಘ(ರಿ) ಸಂಪಾಜೆ ಕೊಡಗು ಸಂಯುಕ್ತ ಆಶ್ರಯದಲ್ಲಿ 28 ನೇ ವರ್ಷದ ಗೌರಿ ಗಣೇಶೋತ್ಸವ ಆಚರಣೆ. ಬೆಳಗ್ಗೆ 7 ಗಂಟೆಗೆ ಗೌರಿಷ್ಠಾಪನೆಯ ನಂತರ ಪೂಜಾ ವಿಧಿ ವಿಧಾನಗಳು ನಡೆದ ನಂತರ ಪುರುಷರ ಹಾಗೂ ಮಹಿಳೆ ಕೆಸರು ಗದ್ದೆ ಹಗ್ಗಜಗ್ಗಾಟ ಮತ್ತು ಅಟ್ಟಿಮಡಿಕೆ ಕ್ರೀಡಾಕೂಟ ನಡೆಯಿತು.

. . . . .

ಮಹಿಳೆಯರ ಹಗ್ಗಜಗ್ಗಾಟದಲ್ಲಿ ನಾಗಶ್ರೀ ಸುಳ್ಯ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಶ್ರೀ ಆಂಜನೇಯ ಸಂಪಾಜೆ ಬೈಲು ಪಡೆದರು. ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಮತ್ತು ದ್ವಿತೀಯ ಸ್ಥಾನವನ್ನು ಶ್ರೀ ಮಹಾಲಿಂಗೇಶ್ವರ ಪುತ್ತೂರು ಎ ಮತ್ತು ಬಿ ತಂಡವು ಪಡೆದುಕೊಂಡಿತು.

ಅಟ್ಟಿ ಮಡಿಕೆ ಕ್ರೀಡಾಕೂಟದಲ್ಲಿ ದಬ್ಬಡ್ಕ ಮಿತ್ರ ಬಳಗದವರು ಜಯ ಪಡೆದುಕೊಂಡಿತು. ಸಂಜೆ 6 ಗಂಟೆಯ ನಂತರ ಭಜನಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸರಿಯಾಗಿ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಆ.31 ರಂದು ಶ್ರೀ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಮಹಾಪೂಜೆ, ಪ್ರಸಾದ ಮಧ್ಯಾಹ್ನ ವಿತರಣೆ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!