ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ ಕುಮಾರ್ ಕೇವಳ ಆ. 30 ರಂದು ಸೇವಾ ನಿವೃತ್ತಿ ನೇ.ಅವರು ಮಡಪ್ಪಾಡಿ ಗ್ರಾಮದ ಕೇವಳ ಪಟೇಲ್ ಕುಶಾಲಪ್ಪ ಗೌಡ ಮತ್ತು ಶ್ರೀಮತಿ ತೇಜಾವತಿ ದಂಪತಿಯ ಪುತ್ರನಾಗಿ ಜನಿಸಿದರು. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮ,ಮೈಸೂರು ಓಪನ್ ಯುನಿವರ್ಸಿಟಿಯಲ್ಲಿ ಬಿ.ಟೆಕ್ ಪದವಿಯನ್ನು ಪೂರೈಸಿದ್ದಾರೆ.
1986ರಲ್ಲಿ ನೇಮಕಾತಿ ಹೊಂದಿ ಕಿರಿಯ ಇಂಜಿನಿಯರ್ ಆಗಿ ಸಣ್ಣ ನೀರಾವರಿ ವಿಭಾಗಕ್ಕೆ ಮಂಗಳೂರು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ನಂತರ ಬಂಟ್ವಾಳ, ಪುತ್ತೂರು, ಮಂಗಳೂರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. 2018 ರಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭಡ್ತಿ ಹೊಂದಿ ಸಣ್ಣ ನೀರಾವರಿ ಉಪವಿಭಾಗ ಮಂಗಳೂರಿನಲ್ಲಿ 2020 ರವರೆಗೆ ಸೇವೆ ಸಲ್ಲಿಸಿ ನಂತರ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಮಂಗಳೂರು ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಆ.30 ರಂದು ಸೇವಾ ನಿವೃತ್ತಿ ಹೊಂದಿದರು.
ಮಂಗಳೂರಿನ ನೆಲೆಸಿರುವ ಕೃಷ್ಣ ಕುಮಾರ್ ಕೇವಳರವರ ಪತ್ನಿ ಶ್ರೀಮತಿ ಭವಾನಿ ಗೃಹಿಣಿ, ಪುತ್ರಿ ಶ್ರೀಮತಿ ಪೂಜಾ ಕೇವಳ ಬೆಂಗಳೂರಿನ ಐ.ಟಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಅಳಿಯ ಮನೀಶ್ ರವರೂ ಐ.ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಎರಡನೇ ಮಗಳು ಡಾ. ಪ್ರಜ್ಞಾ ಕೇವಳ ಎಂ.ಬಿ.ಬಿ.ಎಸ್.ಪದವಿಯನ್ನು ಮುಗಿಸಿರುತ್ತಾರೆ.