
ಮರ್ಕಂಜ ಗ್ರಾಮದ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಗ್ರಾಮಸ್ಥರಿಂದ ಧರಣಿ ಆರಂಭಗೊಂಡಿದೆ.
ಗಣಿಗಾರಿಕೆಯಿಂದ ಸ್ಥಳೀಯರಿಗೆ, ಧಾರ್ಮಿಕ ಕಟ್ಟಡಗಳಿಗೆ, ಶಾಲೆ ಹಾಗೂ ಜನವಸತಿ ಪ್ರದೇಶಕ್ಕೆ ಹಾನಿಯಾಗುತ್ತಿದ್ದು ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮರ್ಕಂಜದ ಹಳೆ ವಿದ್ಯಾರ್ಥಿ ಸಂಘ, ಭಜನಾ ಮಂದಿರದ ಪದಾಧಿಕಾರಿಗಳು, ಗ್ರಾಮಸ್ಥರು ಧರಣಿಯಲ್ಲಿ ತೊಡಗಿದ್ದಾರೆ.