ಮನದಲ್ಲಿ ಛಲವಿತ್ತು, ಹೊಸತನದ ಹುರುಪಿತ್ತು, ಬದುಕಿನಲ್ಲಿ ಗೆಲ್ಲುವ ಆಕಾಂಕ್ಷೆ ಮೊದಲೇ ಇತ್ತು…
ಪ್ರತಿಬಾರಿ ಸೋತಾಗಲೂ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆ ಇತ್ತು, ಸೋಲನ್ನು ಸೋಲಿಸುವ ಹಂಬಲವಿತ್ತು…
ಬದುಕಿನಲ್ಲಿ ಸೋತಾಗ ಬರುವ ಕಣ್ಣೀರು ಮನವ ಕುಗ್ಗಿಸುತ್ತಿತ್ತು, ಆತ್ಮವಿಶ್ವಾಸವ ತಗ್ಗಿಸುತ್ತಿತ್ತು, ಆದರೂ ಮತ್ತೊಮ್ಮೆ ಗೆದ್ದೇ ಗೆಲ್ಲುವೆ ಎನ್ನುವ ಛಲವು ಮನವ ಬಡಿದೆಬ್ಬಿಸುತ್ತಿತ್ತು…
ಜೀವನದಲ್ಲಿ ಗೆಲುವು ಸಿಗಲಿಲ್ಲ ಎಂಬ ಹತಾಶೆ ಮನವ ಕಾಡುತ್ತಿತ್ತು, ಮತ್ತೊಂದೆಡೆ ಪ್ರತೀ ಬಾರಿ ಸೋತಾಗಲೂ ಬದುಕು ಒಂದೊಂದು ಪಾಠವ ಕಲಿಸುತ್ತಿತ್ತು, ಆ ಪಾಠವೇ ಗೆಲುವಿನೆಡೆಗೆ ಸಾಗುವ ಮೆಟ್ಟಿಲಾಗುತ್ತಿತ್ತು…
ಪ್ರತೀ ಬಾರಿ ಸೋತಾಗಲೂ ಮನದಲ್ಲಿ ಒಂದು ಪ್ರಶ್ನೆ ಮೂಡುತ್ತಿತ್ತು, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೆಲುವೇ ಆಗಿತ್ತು…
ಕೊನೆಗೂ ಪಟ್ಟ ಕಷ್ಟಕ್ಕೆ ಪ್ರತಿಫಲ ಎಂಬಂತೆ ಬದುಕು ಗೆಲುವಿನ ಗುರಿ ತಲುಪಿತ್ತು, ಮನದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು…
ಆ ಗೆಲುವಿನ ಪ್ರತಿಯೊಂದು ಮೆಟ್ಟಿಲು ಕೂಡ ಗೆದ್ದ ಈ ಮನಸ್ಸಿಗೆ ಅಮೂಲ್ಯವಾಗಿತ್ತು, ಏಕೆಂದರೆ ಆ ಗೆಲುವಿನ ಪ್ರತಿಯೊಂದು ಮೆಟ್ಟಿಲನ್ನು ಕೂಡ ಗೆಲುವಿನ ಹಾದಿಯಲ್ಲಿ ಬಂದಂತಹ ಸೋಲಿನಿಂದ ಕಟ್ಟಲಾಗಿತ್ತು…
✍️ಉಲ್ಲಾಸ್ ಕಜ್ಜೋಡಿ