ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜೂ.27 ರಂದು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಭೇಟಿ ನೀಡಿದರು. ಠಾಣೆಯ ವತಿಯಿಂದ ಗೃಹ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಸುಬ್ರಹ್ಮಣ್ಯ ಠಾಣೆಗೆ ಟರ್ಪಾಲು ಹೊದಿಸಿರುವ ಬಗ್ಗೆ ಮಾಧ್ಯಮ ವರದಿಯನ್ನರಿತು, ಠಾಣೆಯ ಕಟ್ಟಡ ಪರಿಶೀಲಿಸಿ ಮಾತನಾಡಿದ ಅವರು ಎಲ್ಲಾ ತೊಡಕು ನಿವಾರಿಸಿ ಶೀಘ್ರವೇ ಸುಬ್ರಹ್ಮಣ್ಯ ಠಾಣೆಗೆ ಹೊಸ ಕಟ್ಟಡ ಕಟ್ಟುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗಾನಾ.ಪಿ ಕುಮಾರ್, ಸುಳ್ಯ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ