ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಸಂಭವಿಸಿದ ಲಘು ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 3.0 ದಾಖಲಾಗಿದೆ.
ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ಹಲವೆಡೆ ಭೂಮಿ
ಕಂಪಿಸಿರುವುದಾಗಿ ಹೇಳಲಾಗಿದೆ. ಜೂ.28 ರಂದು ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದೆ.5.2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದ್ದು, ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಕೊಡಗು ಜಿಲ್ಲೆಯ ಕೊಡಗು ಸಂಪಾಜೆ, ಚೆಂಬು,ಕರಿಕೆ, ಪೆರಾಜೆ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದುವರದಿ ತಿಳಿಸಿದೆ. ಜೂ.25 ರಂದು ಬೆಳಿಗ್ಗೆ 9. ದಿನಗಳಿಗಿಂತ ಮೊದಲು ಸಂಭವಿಸಿದ ಭೂ ಕಂಪನಗಿಂದ ಹೆಚ್ಚು ತೀವ್ರತೆಯ ಭೂ ಕಂಪ ಇದಾಗಿದೆ. ಜೂ.25 ಬೆಳಿಗ್ಗೆ 9.10 ರ ವೇಳೆಗೆ ಸಂಭವಿಸಿದ ಭೂಕಂಪನ ಕರಿಕೆ ಸಮೀಪದಲ್ಲಿ ಸಂಭವಿಸಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 2.3 ದಾಖಲಾಗಿತ್ತು.
- Thursday
- November 21st, 2024