
ಕಳೆದ ವಾರವಷ್ಟೇ ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಸಂತೆ ಮಾರುಕಟ್ಟೆಯ ತ್ಯಾಜ್ಯ ಸೂಕ್ತ ಸಮಯಕ್ಕೆ ವಿಲೇವಾರಿಯಾಗದೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ದ.ಕ.ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಿದ ಬಳಿಕ ವಿಲೇವಾರಿಯಾಗಿ ಸುದ್ದಿಯಾಗಿತ್ತು. ಇದೀಗ ಕಳೆದ ಶನಿವಾರ ಬೆಳ್ಳಾರೆಯಲ್ಲಿ ವಾರದ ಸಂತೆ ನಡೆದಿದ್ದು, ಸಂತೆ ನಡೆದ ಬಳಿಕ ಮಾರುಕಟ್ಟೆಯಲ್ಲಿ ಮತ್ತೆ ವಿಲೇವಾರಿಯಾಗದೆ ತ್ಯಾಜ್ಯ ಸಂಗ್ರಹವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿನ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ದೊರಕುತ್ತಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಗ್ರಾಮ ಪಂಚಾಯತ್ ಎದುರು ಸಾರ್ವಜನಿಕರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.