Ad Widget

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸುಳ್ಯದಿಂದ ತೆರಳಲಿರುವ ಟ್ಯಾಬ್ಲೋಗಳಿಗೆ ಸಹಕಾರ ನೀಡುವಂತೆ ಸಚಿವ ಸುನಿಲ್ ಕುಮಾರ್ ಗೆ ಮನವಿ

1837ರಲ್ಲಿ ಸುಳ್ಯದಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಹತ್ತಿಸಿದ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮರಣಾರ್ಥ ಕಂಚಿನ ಪುತ್ಥಳಿಯ ಅನಾವರಣ ಸಂದರ್ಭದಲ್ಲಿ ಸುಳ್ಯ ತಾಲೂಕು ಸ್ವಾತಂತ್ರ್ಯ ಹೋರಾಟದ ಮೂಲ ಸ್ಥಳವಾಗಿದ್ದು, ಇದರ ಇತಿಹಾಸವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದಕ್ಕೋಸ್ಕರ ಟ್ಯಾಬ್ಲೂವನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವುದೆಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ತಮ್ಮ ಮೂಲಕ ದ.ಕ.ಜಿಲ್ಲೆಯ ಆಡಳಿತ ಹಾಗೂ ವಿವಿಧ ಇಲಾಖೆಗಳ ಸಂಪೂರ್ಣ ಸಹಕಾರ ನೀಡಬೇಕೆಂದು ಹಾಗೂ ತಾಲೂಕಿನ ಬೆಳ್ಳಾರೆಯಲ್ಲಿಯೂ ಬ್ರಿಟಿಷರ ಪ್ರವಾಸಿ ಬಂಗ್ಲೆ ಹಾಗೂ ಖಜಾನೆಯನ್ನು ಸುತ್ತುವರಿದು ಆಕ್ರಮಿಸಿದ ಸ್ಥಳವನ್ನು, ಈ ಸ್ವಾತಂತ್ರ್ಯ ಅಮೃತಮಹೋತ್ಸವದ ಸಮಯದಲ್ಲಿ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಪಡಿಸುವ ಮೂಲಕ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ ಚಂದ್ರ ಕೋಲ್ಚಾರ್ ಮನವಿ ಮಾಡಿದರು. ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಜತೆಗಿದ್ದರು. ಈ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಪ್ರ.ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಉಪಾಧ್ಯಕ್ಷರಾದ ಸದಾನಂದ ಮಾವಜಿ , ದಾಮೋದರ ನಾರ್ಕೋಡು, ನಿರ್ದೇಶಕರಾದ ಜ್ಞಾನೇಶ್ ಎಂ.ಎ., ಕೆ‌.ಟಿ.ವಿಶ್ವನಾಥ್, ವೆಂಕಟ್ರಮಣ ಗೌಡ ಕೆದಂಬಾಡಿ,ತರುಣ ಘಟಕದ ಅಧ್ಯಕ್ಷ ರಜತ್ ಅಡ್ಕಾರ್, ತರುಣ ಘಟಕದ ಮಾಜಿ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ದೊಡ್ಡಣ್ಣ ಬರೆಮೇಲು, ಹರೀಶ್ ಕಂಜಿಪಿಲಿ ಮತ್ತಿತರರು ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!