ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ರೋವರ್ ಮತ್ತು ರೇಂಜರ್ ಘಟಕದ ವತಿಯಿಂದ ರೋವರ್ ಮತ್ತು ರೇಂಜರ್ ಪ್ರಾಥಮಿಕ ಹಂತದ ತರಬೇತಿಯನ್ನು ಜೂ. 21ರಂದು ದೃಶ್ಯ ಕೊಠಡಿಯಲ್ಲಿ ಆಯೋಜಿಸಲಾಗಿತ್ತು. ಬೆಳಗ್ಗೆ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ನಂತರ ಎಲ್ಲಾ ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರುದ್ರಕುಮಾರ್ ಎಂಎಂ ಘಟಕದ ವಿದ್ಯಾರ್ಥಿಗಳಿಗೆ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ಶುಭ ಹಾರೈಸಿದರು. ತರಬೇತುದಾರರಾಗಿ RSL ಪ್ರೀತೇಶ್ ಅಧ್ಯಕ್ಷರು, ಯುವ ಸಮಿತಿ (ಭಾರತ್ ಸ್ಕೌಟ್ ಅಂಡ್ ಗೈಡ್ ದಕ್ಷಿಣ ಕನ್ನಡ), ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಾದ ಸೀನಿಯರ್ ರೇಂಜರ್ ಲೀಡರ್ ಚಂದ್ರಕ್ಷ ಹಾಗೂ ಮಹಮ್ಮದ್ ಆಶಿಕ್ ಇವರುಗಳು , ಸ್ಕೌಟ್ ಅಂಡ್ ಗೈಡ್ ಇದರ ಇತಿಹಾಸ, ಮೂಲ ಗಂಟುಗಳು, ಹಿಚ್ಚಸ್, ಲ್ಯಾಫ್ಶಿಂಗ್ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಒಟ್ಟು 10 ರೋವರ್ ವಿದ್ಯಾರ್ಥಿಗಳು ಹಾಗೂ 13 ರೇಂಜರ್ ವಿದ್ಯಾರ್ಥಿಗಳು ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮವನ್ನು ರೋವರ್ ಲೀಡರ್ ಉಮೇಶ್ ಹಾಗೂ ರೇಂಜರ್ ಲೀಡರ್ ಶೋಭಾ ಎ ಸಂಘಟಿಸಿದರು.