
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿಯ ಪಳ್ಳಿಮಜಲ್ ಬೂತ್ ವತಿಯಿಂದ ಪಕ್ಷದ 13ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜೂ.21ರಂದು ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಪಳ್ಳಿಮಜಲು ಬೂತ್ ಅಧ್ಯಕ್ಷರಾದ ಸದ್ದಾಂ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಶಫೀಕ್ ಬೆಳ್ಳಾರೆ ಸಂದೇಶ ಬಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಳ್ಳಿಮಜಲು ಮಸೀದಿ ಕಾರ್ಯದರ್ಶಿ ಹನೀಫ್ ನಜಾತ್, ಹಿರಿಯರಾದ ಸೂಫಿ ಪಳ್ಳಿಮಜಲು, ಎಸ್‌ಡಿಪಿಐ ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಸಫೀಮ್ ಸ್ವಾಗತಿಸಿ, ವಂದಿಸಿದರು.