
ಥಾಯ್ಲೆಂಡ್ ನಲ್ಲಿ ಜರುಗುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕ
ಅಮರಪಡ್ನೂರು ಗ್ರಾಮದ ತಂಟೆಪ್ಪಾಡಿ ವಿಶ್ವನಾಥ ರವರ ಪುತ್ರ ಮೋನಿಷ್ ತಂಟೆಪ್ಪಾಡಿಯವರಿಗೆ ಅಮರಮೂಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಮತ್ತು ಗೌರವಾರ್ಪಣೆಯನ್ನು ಜೂ.19ರಂದು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಆಕಾಶ್ ರವರು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಮೋನಿಷ್ ರವರ ತಂದೆ ವಿಶ್ವನಾಥ, ತಾಯಿ ದಯಾಮಣಿ ವಿಶ್ವನಾಥ , ಸಹೋದರಿ ಕು. ಸ್ವಾತಿ ಉಪಸ್ಥಿತರಿದ್ದರು.