ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಯೋಗ ಸಾಧನೆಯ ಪ್ರಾಮುಖ್ಯತೆಯನ್ನು ತಿಳಿಯಪಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಲು ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐ.ಕ್ಯೂ.ಎ.ಸಿ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಛೇರಿ ತುಮಕೂರು (ರಿ.) ನೇತ್ರಾವತಿ ವಲಯ ಮಂಗಳೂರು ದ.ಕ ಸುಬ್ರಹ್ಮಣ್ಯ ಶಾಖೆಯ ಸಹಯೋಗದೊಂದಿಗೆ ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗವು ನಮ್ಮ ಜೀವನಶೈಲಿಯನ್ನು ಉತ್ತಮಗೊಳಿಸುವ ಮೂಲಕ ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಭಾವವನ್ನು ತಿಳಿಯಲು ಸಹಾಯಕ ಎಂದು ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯರು, ನಿವೃತ್ತ ಯೋಧ ಹಾಗೂ ಯೋಗ ಬಂಧು ಆಗಿರುವಂತಹ ಶ್ರೀಯುತ ಸುಬ್ರಹ್ಮಣ್ಯ.ಎ.ಯು ಅವರು ತಿಳಿಯಪಡಿಸಿದರು.
ಪತಂಜಲಿ ಯೋಗ ಶಿಕ್ಷಣದ ಯೋಗ ಬಂಧುಗಳಾದ ಶ್ರೀ ಬಾಲಕೃಷ್ಣ.ಆರ್, ಶ್ರೀ ಸುಬ್ರಹ್ಮಣ್ಯ ಭಟ್.ಪಿ.ಎಸ್, ಶ್ರೀಮತಿ ಜಯಲಕ್ಷ್ಮಿ.ಪಿ.ಎಸ್, ಶ್ರೀಮತಿ ರಾಜೇಶ್ವರಿ.ಪಿ.ಎಸ್ ಹಾಗೂ ಶ್ರೀ ನಾಗರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದರು.
ಯೋಗವು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಪ್ರಸಾದ್.ಎನ್ ಅವರು ತಿಳಿಸಿದರು.
ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಬೆಳ್ಳಾರೆಯ ಸದಸ್ಯರಾದ ಶ್ರೀಮತಿ ಶ್ರೀಲತಾ ಕಮಿಲ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ವನಿತಾ.ಕೆ.ಎನ್ ಧನ್ಯವಾದ ಸಮರ್ಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕೃತಿಕಾ.ಪಿ.ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ