ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರು ವಹಿಸಿ, ಜೀವನದಲ್ಲಿ ಆರೋಗ್ಯಯುತವಾದ ಸದೃಢ ಶರೀರವನ್ನು ಇಟ್ಟುಕೊಳ್ಳಬೇಕಾದರೆ ಕನಿಷ್ಠ ಯೋಗಾಭ್ಯಾಸವನ್ನಾದರೂ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗೇನ ಚಿತ್ತೈಸ್ಯ ಯೋಗ ಕೇಂದ್ರದ ಯೋಗಶಿಕ್ಷಕಿ ಪ್ರಶ್ವಿಜಾ ಕೆ.ಎಸ್. ಅವರು ಯೋಗದ ಮಹತ್ವ ಕುರಿತು ಮಾತನಾಡಿದರು ಹಾಗೂ ಅತ್ಯಗತ್ಯವಾಗಿ ಕಲಿತಿರಬೇಕಾದ ಯೋಗವನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ, ನಿರ್ದೇಶಕರಾದ ಆನಂದ ಚಿಲ್ಪಾರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಅವರು ಸ್ವಾಗತಿಸಿದರು. ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯಿನಿ ಚೈತ್ರ ಅವರು ವಂದಿಸಿದರು. ಶಿಕ್ಷಕರಾದ ಹರಿಪ್ರಸಾದ್ ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.