Ad Widget

ಬೆಳ್ಳಾರೆ: ಉಪಯೋಗಶೂನ್ಯ ರೀತಿಯಲ್ಲಿದೆ ಸಾರ್ವಜನಿಕ ಶೌಚಾಲಯ

ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪೇಟೆ ಎನಿಸಿಕೊಂಡಿರುವ ಬೆಳ್ಳಾರೆ ಪೇಟೆಯ ಬೆಳ್ಳಾರೆ-ಸುಳ್ಯ ಮಾರ್ಗದಲ್ಲಿ ಬಸ್ಸು ತಂಗುದಾಣದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಗಳಿಂದ ಉಪಯೋಗಶೂನ್ಯ ರೀತಿಯಲ್ಲಿದೆ. ಹೆಂಗಸರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ಶೌಚಾಲಯವಿದ್ದರೂ ನೀರಿನ ಪೂರೈಕೆಯಿಲ್ಲದೆ ಶೌಚಾಲಯ ಸಾರ್ವಜನಿಕರಿಗೆ ಉಪಯೋಗವಾಗದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

. . . . . . . . .

ಶೌಚಾಲಯದ ಎದುರುಗಡೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ವಿದ್ಯಾರ್ಥಿಗಳು ಶಾಲೆ ಬಿಟ್ಟು ತೆರಳುವಾಗ ಶೌಚಾಲಯಕ್ಕೆ ಹೋಗಬೇಕೆಂದಾದರೆ ಮೇಲಿನ ಪೇಟೆಯಲ್ಲಿರುವ ಶೌಚಾಲಯವನ್ನೇ ಅವಲಂಬಿಸಬೇಕಾಯಿತು. ಅಲ್ಲದೇ ಇದರ ಪಕ್ಕದಲ್ಲಿಯೇ ಆಟೋ ನಿಲ್ದಾಣ ಹಾಗೂ ಪಿಕ್ಅಪ್ ನಿಲ್ದಾಣವಿದ್ದು ಶೌಚಾಲಯದ ದುರವಸ್ಥೆಯಿಂದ ಚಾಲಕರು ಹಾಗೂ ಪ್ರಯಾಣಿಕರು ಹೈರಾಣಾಗಿದ್ದಾರೆ.

. . . . . . .

ಈ ಕುರಿತಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಬೆಳ್ಳಾರೆಯವರು ಸುಳ್ಯ ತಾ.ಪಂ.ಇಓ ರವರ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಅದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading