
ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಕೊಡಮಾಡುವ ಯುವ ರತ್ನ ಅಪ್ಪು ಪ್ರಶಸ್ತಿಗೆ ಕಬಡ್ಡಿ ಕ್ರೀಡಾಪಟು ಭವಿತ್ ಜಿ.ಬಿ. ಆಯ್ಕೆಯಾಗಿದ್ದಾರೆ.
ಇವರು ಕಬಡ್ಡಿಯಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಎಲಿಮಲೆ ಜ್ಞಾನದೀಪ ಶಾಲೆಯ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಮತ್ತು ದೈ.ಶಿ.ಶಿಕ್ಷಕಿ ದಿವ್ಯಾ ಬಾಳುಗೋಡುರವರ ಪುತ್ರ.
ಪ್ರಶಸ್ತಿಯನ್ನು ಜೂ.25ರಂದು ಬೆಂಗಳೂರಿನ ಎ.ವಿ.ವರದಚಾರ್ ಮೆಮೊರಿಯಲ್ ಆಟ್೯ ನಲ್ಲಿ ನಡೆಯುವ ಯುವ ರತ್ನ ಅಪ್ಪು ಗೀತಾ ಗಾಯನ ರಸಮಂಜರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.