Ad Widget

ದೇಶದ ಭದ್ರತೆಗೆ ಅಗ್ನಿ ಪಥ ಯೋಜನೆ – ಯುವಕರೆ ಅಗ್ನಿ ವೀರರಾಗಿ- ದೇಶದ ಸಮರ್ಥ ನಾಯಕರಾಗಿ

ನಮ್ಮ ದೇಶದ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ದೇಶದ ಯುವ ಸಮುದಾಯವನ್ನು ಸಮರ್ಥ ನಾಗರಿಕರನ್ನಾಗಿ ಮಾಡಲು ಕೆಲವು ದಿನಗಳ ಹಿಂದೆ ರಕ್ಷಣಾ ಮಂತ್ರಿಯಾದ ಶ್ರೀ ರಾಜನಾಥ ಸಿಂಗ್ ಮತ್ತು ಸೇನೆಯ ಮೂರು ಅಂಗಗಳ ಮುಖ್ಯಸ್ಥರು ಜೊತೆಯಾಗಿ ಸೈನ್ಯಕ್ಕೆ ಬೇಕಾಗಿರುವ ಮಹತ್ವದ ಸುಧಾರಣೆಯನ್ನು ಜಾರಿಗೊಳಿಸಿದರು. ಈ ಯೋಜನೆಯನ್ನು ಸುಮಾರು ಎರಡು ವರ್ಷಗಳಿಂದ ಅಧ್ಯಯನ ಮಾಡಿ  ,ಅದರ ಬಗ್ಗೆ ಚಿಂತನೆಗಳನ್ನು ಮಾಡಿ  ,ಎಲ್ಲಾ ಸಾಧಕ – ಬಾಧಕಗಳನ್ನು ಪರಿಶೀಲಿಸಿ, ಸೈನ್ಯಕ್ಕೆ ಆಗುವ ಉಪಯೋಗಗಳನ್ನು ಸಮೀಕ್ಷೆ ಮಾಡಿ , ನಮ್ಮ ದೇಶಕ್ಕೆ ಒಳಿತಾಗುವ ಉದ್ದೇಶದಿಂದ ಅಗ್ನಿಪತ್ ಯೋಜನೆ ಜಾರಿಯಾಗಿದೆ.

. . . . .

1973 ರ ಯುದ್ಧದ ನಂತರ ಇಸ್ರೇಲ್ ತನ್ನ ಸೈನ್ಯದಲ್ಲಿ ಕಿಚ್ಚು ಮಾತ್ರ ಇದ್ದರೆ ಸಾಲದು ಸ್ವಾವಲಂಬನೆ ಕೂಡ ಬೇಕು ಎಂಬುವುದನ್ನು ಅರಿತುಕೊಂಡಿತು. ಅದಾಗಲೇ ಇಸ್ರೇಲ್ ಸೈನ್ಯ ತರಬೇತಿಯನ್ನು ಕಡ್ಡಾಯಗೊಳಿಸಿತು. ಸೈನ್ಯದಲ್ಲಿ ಹಲವಾರು ಬದಲಾವಣೆಗಳನ್ನು ತಂದ ಇಸ್ರೇಲ್‌ ತನ್ನ ವಿರೋಧಿಗಳಿಂದ ಕನಿಷ್ಟ ಹತ್ತು ವರ್ಷ ಮುಂದಿರಬೇಕೆಂಬ ಗುರಿ ಇಟ್ಟುಕೊಂಡಿತು. ಸೈನ್ಯದಲ್ಲಿ ಸಂಶೋಧನೆ, ಶಿಕ್ಷಣ, ತಂತ್ರಜ್ಞಾನ, ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿತು. ಇದರಿಂದಾಗಿ ಸೈನ್ಯದ ಸ್ವರೂಪವೆ ಬದಲಾಯಿತು . ಸೈನಿಕ ಸಮವಸ್ತ್ರ ಧರಿಸಿ ವಿಜ್ಞಾನಿಗಳು ಸಂಶೋಧಕರಾಗಬಹುದೆಂಬುದನ್ನು  ತೋರಿಸಿತು. ಪೈಲಟ್ ಗಳಾಗುವ ಬದಲು ವಿಮಾನ ತಯಾರಿಸುವ ಅವಕಾಶ ನಿಮಗಿದೆ ಎಂದು ಯುವಕರನ್ನು ಕೈ ಬೀಸಿ ಕರೆಯಿತು. ಪ್ರತಿಭಾನ್ವಿತ ವ್ಯಕ್ತಿಯೊಬ್ಬ/ಳು ಬಂದೂಕು ಹಿಡಿದು ಗಡಿ ಕಾಯಬೇಕೆಂದೆನಿಲ್ಲ ಬದಲಾಗಿ ಬಂದೂಕು ತಯಾರಿಸಬಹುದು ಎಂದು ಉತ್ತೇಜನ ನೀಡಿತು. ಸೈನ್ಯದಲ್ಲಿ ಆಸಕ್ತಿ ಇರುವ ಯುವಕರಿಗೆ ಟೆಲ್ಫೀಯೋಟ್ ಘಟಕ ಕಾರ್ಯರಂಭ ಮಾಡಿತು . ಗೆರಿಲ್ಲಾ ಯುದ್ಧ ತಂತ್ರ, ಹವಾಮಾನ ಅಧ್ಯನ , ಪ್ರತಿತಂತ್ರ , ಗೂಢಾಚಾರ್ಯೆ , ಶತ್ರುಗಳ ಚಲನ ವಲನ , ಯುದ್ಧ ವಿನ್ಯಾಸಗಳ ತರಬೇತಿ ನೀಡಿತು. 1979ರಲ್ಲಿ ನಿರ್ಮಾಣವಾದ ಟೆಲ್ಫಿಯೋಟ್ ಇಂದು ಜಗತ್ಪ್ರಸಿದ್ಧವಾಗಿದೆ. ಇಂದು ಯಾವೆಲ್ಲ ಯುದ್ಧೋಪಕರಣಗಳು ಇಸ್ರೇಲ್ ನಿರ್ಮಿತವಾಗಿದೆಯೋ ಅವೆಲ್ಲವೂ ಟೆಲ್ಫಿಯೋಟ್ ನಿಂದಾಗಿದೆ. ಇಂದು ಟೆಲ್ಫಿಯೋಟ್ ಘಟಕ ಇಸ್ರೇಲ್ ದೇಶದ ಅತಿ ದೊಡ್ಡ ಆರ್ಥಿಕತೆಯ ಬಹುದೊಡ್ಡ ಶಕ್ತಿಯಾಗಿದೆ. ಸಾವಿರಾರು ಕೋಟಿ ರೂಪಾಯಿ ವಿದೇಶಿ ವ್ಯಾಪರವನ್ನು ನಡೆಸುತ್ತದೆ. ಟೆಲ್ಪಿಯೋಟ್ ಯೋಜನೆಯು ದೇಶದ ಶಕ್ತಿಯಾಗಿರುವುದಕ್ಕೆ ಇಸ್ರೇಲ್ ಹೆಮ್ಮೆ ಪಡುತ್ತದೆ.

ಭಾರತದ ಅಗ್ನಿ ಪಥ ಯೋಜನೆ ಕೂಡ ಟೆಲ್ಫಿಯೋಟ್ ನಂತಹ ಶಕ್ತಿಶಾಲಿ ಯೋಜನೆಯಾಗಿ ರೂಪುಗೊಳ್ಳಬಹುದು. ಸೈನ್ಯದಲ್ಲಿ ಬದಲಾವಣೆ ಅನಿವಾರ್ಯ. ವರ್ಷಗಳು ಕಳೆದಂತೆ ಸೈನ್ಯದಲ್ಲಿ ಆಧುನೀಕರಣ, ಡಿಜಿಟಲೀಕರಣದ ಅಗತ್ಯವಿದೆ. ಭಾರತದ ಅಗ್ನಿ ಪಥ ಯೋಜನೆ ಟೆಲ್ಫಿಯೋಟ್ ನಂತಹ ಶಸ್ತ್ರಾಸ್ತ್ರ ತಯಾರಿಕ ಘಟಕವಾಗಬಹುದು.

ಅಗ್ನಿ ಪಥ್ ಗೆ ಸೇರಿಕೊಂಡರೆ ಅಗ್ನಿ ವೀರರಾಗುತ್ತಾನೆ/ ಳೆ ಇಲ್ಲಿ ಪುರುಷರು ಮಹಿಳೆಯರಿಗೂ ಸಮಾನ ಅವಕಾಶ ಇದೆ. ಸರಕಾರದ ಮಾಹಿತಿ ಪ್ರಕಾರ 46 ಸಾವಿರ ಅಗ್ನಿ ವೀರರನ್ನು ನೇಮಕ. ಮಾಡಿಕೊಳ್ಳುವ ಯೋಜನೆಯಾಗಿದೆ. ಅಗ್ನಿವೀರರಿಗೆ ದೇಶಸೇವೆ ಮಾಡುವ ಸುವರ್ಣ ಅವಕಾಶ ಸಿಗಳಿದೆ. ಯೋಜನೆಯ ಮಾನದಂಡಗಳ ನಡುವೆ ಸೈನ್ಯದ ಮೂರು ಅಂಗಗಳಿಗೂ ನೇಮಕಾತಿ ನಡೆಯುತ್ತದೆ. ಅಗ್ನಿ ವೀರರಿಗೆ ಊಟ ವಸತಿ ಮೆಡಿಕಲ್ ಸೌಲಭ್ಯಗಳು ಉಚಿತವಾಗಿರುತ್ತದೆ. ನಾಲ್ಕು ವರ್ಷ ಪೂರೈಸಿದನಂತರ ಅಗ್ನಿ ವೀರರಿಗೆ 11ಲಕ್ಷಕ್ಕೂ ಅಧಿಕ ಮೊತ್ತ ಸೇವಾ ನಿಧಿಯಲ್ಲಿ ಪಾವತಿಯಾಗುತ್ತದೆ.

*ಅಗ್ನಿ* *ವೀರಾದರವರು* *ದೇಶದ* *ಸಮರ್ಥ* *ನಾಯಕರಾಗಬಲ್ಲರು*

ಯೋಜನೆಯು ದೇಶದ ಯುವಕ ಯುವತಿಯರಿಗೆ ಸೈನ್ಯದ ಶಿಕ್ಷಣ ತರಬೇತಿ ನೀಡಿ ಜೀವನದಲ್ಲಿ ಗಂಡುಗಲಿಗಳನ್ನಾಗಿ ಮಾಡುತ್ತದೆ. ಅಗ್ನಿವೀರರಾದವನು ಜೀವನದಲ್ಲಿ ಶಿಸ್ತು , ತಾಲ್ಮೆ , ತುರ್ತು ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆ, ರಾಷ್ಟ್ರ ಪ್ರೇಮ , ಕಠಿಣ ಪರಿಸ್ಥಿತಿಯಲ್ಲಿ ಎದುರಿಸುವ ಮನೋಭಾವ ಹೊಂದಿರುತ್ತಾನೆ/ಳೆ. ಅಲ್ಲದೆ ಸಮರ್ಥ ನಾಯಕನಾಗಿ ಹೊರಹೊಮ್ಮುತ್ತಾನೆ/ಳೆ . ನಾಲ್ಕು ವರ್ಷಗಳ ನಂತರ ಅವನು/ಅವಳು ನಾಲ್ಕು ಜನರಿಗೆ ಉದ್ಯೋಗ ನೀಡುವ ಉದ್ದಿಮೆ ನಡೆಸಬಲ್ಲ. ದೇಶದ ಸಾರ್ವಜನಿಕ ಆಸ್ತಿ ಪಾಸ್ತಿ ಗಳನ್ನು ನಾಶ ಮಾಡುವುದು, ಕಲ್ಲು ತೂರುವುದು. ಮುಂತಾದ ದುಷ್ಕ್ರತ್ಯ ಮನೋಭಾವದಿಂದ ಖಂಡಿತವಾಗಿಯೂ ದೂರ ಉಳಿಯುತ್ತಾರೆ.

ಬರಹ ; ಭಾಸ್ಕರ ಜೋಗಿಬೆಟ್ಟು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!