Ad Widget

ಜೂ.22 : ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡ ರುದ್ರಭೂಮಿ ಹಸ್ತಾಂತರ

ಸುಳ್ಯ ರೋಟರಿ ಕ್ಲಬ್ ವತಿಯಿಂದ ಜಯನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ರುದ್ರಭೂಮಿಯ ಬಗ್ಗೆ ಕ್ಲಬ್ ಅಧ್ಯಕ್ಷ ಪ್ರಭಾಕರ ನಾಯರ್ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

. . . . . . .

ರೊಟರಿ ಕ್ಲಬ್ ಸುಳ್ಯ 2021-22ರ ಅವಧಿಯ ಜಿಲ್ಲಾ ಯೋಜನೆಯಂತೆ ಸುಳ್ಯ ನಗರ ಪಂಚಾಯತ್ ಅಧೀನದಲ್ಲಿರುವ ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡಿರುವ ಸಾರ್ವಜನಿಕ ರುದ್ರಭೂಮಿಯನ್ನು ಜೂ.22 ರಂದು ಶಾಸಕರು ಮತ್ತು ಸಚಿವರಾದ ಎಸ್. ಅಂಗಾರ, ನಗರ ಪಂಚಾಯತ್ ಸುಳ್ಯ ಅಧ್ಯಕ್ಷರು ವಿನಯ್ ಕುಮಾರ್ ಕಂದಡ್ಕ , ಯೋಜಿತ ರೋಟರಿ ಜಿಲ್ಲಾ ಗವರ್ನರ್ ಕಾರಂತ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ನಗರ ಪಂಚಾಯತ್ ಸುಳ್ಯ ಇವರಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ನವೀಕೃತ ಸ್ಮಶಾನ ರೂಪುಗೊಳ್ಳುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಂದು ಸಿಲಿಕಾನ್ ಚೇಂಬರನ್ನು ಉಚಿತವಾಗಿ ನೀಡಿರುವುದಲ್ಲದೇ ರೋಟರಿ ಸದಸ್ಯರು, ಊರಿನ ಗಣ್ಯರು ಕೈ ಜೋಡಿಸಿರುತ್ತಾರೆ. ಈ ಅಭಿವೃದ್ಧಿ ಯೋಜನೆಯಡಿಯಲ್ಲಿ ಶಿಥಿಲಗೊಂಡಿದ್ದ ಸ್ಮಶಾನದ ಛಾವಣಿಯನ್ನು ನೂತನವಾಗಿ ನಿರ್ಮಿಸಲಾಗಿದೆ. ಸ್ಮಶಾನದ ಶೋಭೆಯನ್ನು ಹೆಚ್ಚಿಸಲು ಸುಮಾರು 20 ಫೀಟ್ ಉದ್ದದ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶವ ಸಂಸ್ಕಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ತಂಗುದಾಣವನ್ನು ನಿರ್ಮಿಸಲಾಗಿದೆ ಹಾಗೂ ಅದರಲ್ಲಿ ಶೌಚಾಲಯ ಮತ್ತು ಸ್ನಾನದ ಕೋಣೆಯನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 16 ಲಕ್ಷ ವೆಚ್ಚವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ನಿಸರ್ಗ ಮಸಾಲೆ ತಯಾರಿಕಾ ಸಂಸ್ಥೆಯ ಮಾಲಕ ರೊ. ಕಸ್ತೂರಿ ಶಂಕರ್, ಕಾರ್ಯದರ್ಶಿ ಆನಂದ ಖಂಡಿಗ, ಜಯಪ್ರಕಾಶ್ ರೈ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!