2021-22 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಕಲಾ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 51 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 49 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96.07% ಪಡೆದುಕೊಂಡಿದೆ.
ಇದರಲ್ಲಿ 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ 07 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಿಂದ 25 ವಿದ್ಯಾರ್ಥಿಗಳು ಹಾಜರಾಗಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96% ಹಾಗೂ ವಾಣಿಜ್ಯ ವಿಭಾಗದಿಂದ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 25 ಮಂದಿ ಉತ್ತೀರ್ಣರಾಗಿ 96.29% ಫಲಿತಾಂಶ ಪ್ರಕಟಗೊಂಡಿದೆ.
ಕೊಲ್ಲಮೊಗ್ರದ ತಿರುಮಲೇಶ್ವರ.ಡಿ,ಶಶಿಕಲಾ,ದಬ್ಬಡ್ಕ ದಂಪತಿಗಳ ಪುತ್ರಿ ಸುಶ್ಮಿತಾ.ಡಿ.ಟಿ ವಾಣಿಜ್ಯ ವಿಭಾಗದದಲ್ಲಿ 539, ಸಾಲ್ತಾಡಿಯ ಬಳ್ಳಡ್ಕ ವೆಂಕಟ್ರಮಣ.ಬಿ ಮತ್ತು ಸೀತಮ್ಮ.ಟಿ ಯವರ ಪುತ್ರಿ ಅಂಕಿತಾ.ಬಿ.ವಿ.ವಾಣಿಜ್ಯ ವಿಭಾಗದಲ್ಲಿ 534, ಹಾಲೆಮಜಲು ಮನೆಯ ವಸಂತ.ಹೆಚ್ ಮತ್ತು ರೂಪ ದಂಪತಿಗಳ ಪುತ್ರಿ ದೀಕ್ಷಾ.ಹೆಚ್.ವಿ ಕಲಾ ವಿಭಾಗದಲ್ಲಿ 516, ನಾಲ್ಕೂರು ಗ್ರಾಮದ ಸಾಲ್ತಾಡಿ ಮನೆಯ ಪೊಡಿಯಾ.ಜಿ ಮತ್ತು ಗಿರಿಜಾ.ಕೆ ದಂಪತಿಗಳ ಪುತ್ರಿ
ದಿವ್ಯಾ.ಜಿ.ಪಿ ಕಲಾ ವಿಭಾಗದಲ್ಲಿ 514 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.