ಬೆಂಗಳೂರಿನ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಇದರ ಆಶ್ರಯದಲ್ಲಿ ಜೂ.16 ರಂದು ಗ್ರಾಮ ಪಂಚಾಯತ್ ಚೆಂಬು ಹಾಗೂ ಬಾಲೆಂಬಿ ಮತ್ತು ಕುದ್ರೆಪಾಯ ಉಪ ಕೇಂದ್ರದ ವತಿಯಿಂದ ಚೆಂಬು ಗ್ರಾಮದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷಾ ಮೇಳ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಭಿವೃದ್ಧಿ ಅಧಿಕಾರಿಕುಮಾರ್ ನೆರವೇರಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದ್ಯಸರುಗಳಾದ ತೀರ್ಥರಾಮ ಹಾಗೂ ಗಿರೀಶ್ ಉದ್ಘಾಟನೆಯಲ್ಲಿ ಸಹಕರಿಸಿದರು. ಪ್ರಾ.ಆ.ಕೇಂದ್ರ ವೈದ್ಯಾಧಿಕಾರಿ ಡಾ. ರಿಷಬ್ ರೈ, ಉದ್ಭವ್ ಸಂಸ್ಥೆ ಸಂಪಾಜೆ ಪ್ರಾ.ಆ.ಕೇಂದ್ರದ ಆಡಳಿತ ಅಧಿಕಾರಿ ಪಿ ಮಲ್ಲಿಕಾರ್ಜುನ ರವರ ಸಮ್ಮುಖದಲ್ಲಿ ಪೆರಾಜೆ ಸಮುದಾಯ ಆರೋಗ್ಯ ಅಧಿಕಾರಿ ಸುನಿಲ್ ಬಾಲೆಂಬಿ, ಉಷಾ ಕುದ್ರೆಪಾಯ, ಅರ್ಪಿತ ಇವರುಗಳು ಜನರಿಗೆ ರಕ್ತದೊತ್ತಡ, ಮಧುಮೇಹ ಶುಗರ್ ಟೆಸ್ಟ್ ಮಾಡಿ ಉತ್ತಮ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾ.ಆ.ಸುರಕ್ಷಾಧಿಕಾರಿಗಳು ವಸಂತ ಮತ್ತು ಗೀತಾ , ಆರೋಗ್ಯ ನಿರೀಕ್ಷಣಾಧಿಕಾರಿ ಅನಂತ ಕುಮಾರ್ ಹಾಗೂ ಶರತ್, ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಹಾಗು ಆಶಾ ಕಾರ್ಯಕರ್ತೆಯರಾದ ಚಿನ್ನಮ್ಮ, ವೇದಾವತಿ, ಶ್ರೀಜ, ಲೀಲಾವತಿ, ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮ ದಲ್ಲಿ ಜನರಿಗೆ ರಕ್ತದೊತ್ತಡ, ಮಧುಮೇಹ ಮಲೇರಿಯ ಹಾಗು -ಕೋವಿಡ್ ಲಸಿಕಾಕರಣ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಗ್ಗೆ ಮಾಹಿತಿ ನೀಡಿ 11 ಜನರಿಗೆ ಲಸಿಕೆ ಹಾಕಲಾಯಿತು. ಹಾಗೂ ಕಣ್ಣಿನ ಪರೀಕ್ಷೆ ಯನ್ನು 29 ಜನರಿಗೆ ಮಾಡಲಾಯಿತು. ಈ ಮೇಳದಲ್ಲಿ 86 ಜನರು ಹಾಜರಾಗಿ ಸದುಪಯೋಗ ವನ್ನು ಪಡೆದುಕೊಂಡರು.
- Thursday
- November 21st, 2024