ದಿನಾಂಕ 10/6/2022 ಶುಕ್ರವಾರದಂದು ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಗೋವಿಂದ ಎನ್. ಎಸ್. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರು, ಕೆ.ಎಸ್.ಎಸ್ ಕಾಲೇಜು, ಸುಬ್ರಹ್ಮಣ್ಯ ಇವರು ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಇವರು ” ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿ ಜನತೆಗೆ ಜ್ಞಾನ ಕೇಂದ್ರವಾಗುವಲ್ಲಿ ಶ್ರಮಿಸಬೇಕಾಗಿದೆ. ಈ ನೆಲೆಯಲ್ಲಿ ನಮ್ಮ ಅಭಿವ್ಯಕ್ತಿ ಮಾತ್ರವಾಗದೆ, ಉದ್ದೇಶಪೂರ್ವಕವಾಗಿ ಸಮಾಜದ ಅಭಿವ್ಯಕ್ತಿಯು ಆಗಬೇಕು” ಎನ್ನುವುದರೊಂದಿಗೆ “ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ದಕ್ಕಿಸಕೊಳ್ಳಬೇಕು. ಈ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಬೇಕು” ಎಂದು ಆಶಿಸಿದರು. “ಸರ್ಕಾರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಅನೇಕ ಬೆಂಬಲಗಳನ್ನು ಕೊಡುತ್ತಿದ್ದು ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಶಿಕ್ಷಕರ ಸಲಹೆ, ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಪಾಲಿಸಬೇಕು. ಪ್ರಾಕ್ಟಿಕಲ್ ಆಗಿ ಕಾರ್ಯ ನಿರ್ವಹಿಸಬೇಕು ಎಂದರು. ಹೊಸ ಶಿಕ್ಷಣ ನೀತಿಯು ಇದಕ್ಕೆ ಅವಕಾಶ ಮಾಡಿಕೊಡುತ್ತಿದ್ದು ಕಠಿಣ ಪರಿಶ್ರಮದಿಂದ ಈ ವ್ಯವಸ್ಥೆಯನ್ನು ತುಂಬಬೇಕು” ಎಂದು ನುಡಿದರು. “ನಾನು ನನ್ನ ಕುಟುಂಬ ಭ್ರಷ್ಟಾಚಾರ ಮಾಡುವುದಿಲ್ಲ, ನನ್ನ ರಾಷ್ಟ್ರ ಭ್ರಷ್ಟವಾಗುವುದನ್ನು ನಾನು ಬಯಸುವುದಿಲ್ಲ ಎಂಬ ನಿರ್ಧಾರದೊಂದಿಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು” ಎಂದು ಆಶಿಸಿದರು. “ದೂರದೃಷ್ಟಿ ಬೆಳೆಸಿಕೊಳ್ಳೋದರೊಂದಿಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಸಂಯೋಜಕರಾಗಿರುವ ಡಾ. ಜಯರಾಜ್ ಎನ್ ಇವರು ವಹಿಸಿಕೊಂಡು ಕಾಲೇಜಿನ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ವಿವಿಧ ಸವಾಲುಗಳನ್ನು ಎದುರಿಸಿ ನಿರ್ವಹಿಸಲಾಗುವುದು ಎಂದರು. ವಿದ್ಯಾರ್ಥಿ ನಾಯಕರುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತು, ಸ್ವಾಗತ ಮತ್ತು ಪ್ರತಿಜ್ಞಾ ವಿಧಿ ಬೋಧನೆಯನ್ನು ವಿದ್ಯಾರ್ಥಿ ಕ್ಷೇಮಪಾಲಕರಾಗಿರುವ ಸುರೇಶ್ ಕೆ ಇವರು ಮಾಡಿದರು. ಉದ್ಘಾಟಕರನ್ನು ಡಾ. ಸೀತಾರಾಮ ಪಿ. ಸಹ ಸಂಯೋಜಕ, ಮುಖ್ಯಸ್ಥರು ಇತಿಹಾಸ ವಿಭಾಗ ಪರಿಚಯಿಸಿದರು. ಡಾ. ನೂರಂದಪ್ಪ ಕಾರ್ಯಕ್ರಮಾಧಿಕಾರಿ ಯುವ ರೆಡ್ ಕ್ರಾಸ್ ಸಂಸ್ಥೆ ಇವರು ಧನ್ಯವಾದಗಳನ್ನು ಸಮರ್ಪಿಸಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿಗಳು ಮಾಡಿದರು. ದಿವ್ಯಾಶ್ರೀ ಜಿ., ಲಲಿತ ಕಲಾ ಸಂಘದ ಸಂಚಾಲಕರು ಕಾರ್ಯಕ್ರಮ ನಿರೂಪಿಸಿದರು.
ಇದೇ ದಿನ ಬೆಳಿಗ್ಗೆ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ವಿಭಾಗದ ವತಿಯಿಂದ ಗಿಡ ನೆಡುವುದರ ಮುಖಾಂತರ ವನಮಹೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಮಂಜುಳಾ ಎನ್, ಪಂಚಾಯತ್ ನ ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್, ಬಿಲ್ ಕಲೆಕ್ಟರ್ ಶಿವಪ್ರಸಾದ್ ಭಾಗವಹಿಸಿದರು.
ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.