ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಇತರೇ ತ್ಯಾಜ್ಯವನ್ನು ಕಳೆದ ಶನಿವಾರದಿಂದ ವಿಲೇವಾರಿ ಮಾಡದೆ ಕೊಳೆತ ಸ್ಥಿತಿಯಲ್ಲಿದ್ದು, ಪಕ್ಕದ ಆಟೋ ನಿಲ್ದಾಣ ಹಾಗೂ ಬಸ್ ತಂಗುದಾಣಕ್ಕೆ ಕೊಳೆತ ವಾಸನೆ ಹರಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.
ಈ ಬಗ್ಗೆ ಕಳೆದ ಆದಿತ್ಯವಾರ ಕರ್ನಾಟಕ ರಾಷ್ಟ್ರ ಸಮಿತಿ ಸುಳ್ಯ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಇಂದು ಸದಾಶಿವ ಪೂಜಾರಿಯವರು ದ.ಕ.ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಲಾಗಿ ಇದೀಗ ಗ್ರಾಮ ಪಂಚಾಯತ್ ಕಾರ್ಯ ಪ್ರವೃತ್ತವಾಗಿ ತ್ಯಾಜ್ಯ ವಿಲೇವಾರಿ ಮಾಡಿದೆ.