ಅನುಭವವು ತಾನೇ ಜಗದ ಅತೀ ದೊಡ್ಡ ಪಾಠವು, ಅನುಭವವು ಕಲಿಸುವ ಪಾಠ ಎಂದೂ ಮರೆಯದು, ಬದುಕಿನಲ್ಲಿ ಎಂದೂ ಮರೆಯದು, ಅದು ಸೋಲೇ ಇರಲಿ ಇಲ್ಲ ಗೆಲುವೇ ಇರಲಿ, ಅದು ನೋವೇ ಇರಲಿ ಇಲ್ಲ ನಲಿವೇ ಇರಲಿ…
ಬದುಕಿನ ಪ್ರತಿ ನಿಮಿಷ ಅನುಭವವೇ ತಾನೇ, ಒಂದೊಂದು ನಿಮಿಷವು ಇಲ್ಲಿ ಪಾಠವೇ ತಾನೇ…
ಅನುಭವದ ಪುಸ್ತಕದಲ್ಲಿ ಸೋಲುನೂ ಒಂದು ಪಾಠ, ಗೆಲುವನ್ನು ಕಲಿಸುವಂಥ ಪಾಠ ಈ ಸೋಲು, ಬದುಕಿನಲ್ಲಿ ಗೆಲುವನ್ನು ಕಲಿಸುವಂಥ ಪಾಠ ಈ ಸೋಲು…
ಸೋಲೆಂಬ ಎರಡಕ್ಷರಕ್ಕೆ ಗೆಲುವೆಂಬ ಮೂರಕ್ಷರದಿ ಉತ್ತರಿಸುವ ಕಾಲವು ಇಲ್ಲಿ ಬಂದೇ ಬರುವುದು, ಬದುಕಿನಲ್ಲಿ ಬಂದೇ ಬರುವುದು…
ನೋವೆಂಬ ಎರಡಕ್ಷರಕ್ಕೆ ನಲಿವೆಂಬ ಮೂರಕ್ಷರದಿ ಉತ್ತರಿಸುವ ಕಾಲವು ಇಲ್ಲಿ ಬಂದೇ ಬರುವುದು, ಬದುಕಿನಲ್ಲಿ ಬಂದೇ ಬರುವುದು…
ಯಾವುದು ಇಲ್ಲಿ ಶಾಶ್ವತವಲ್ಲ, ನಾವು ನೀವು ಶಾಶ್ವತವಲ್ಲ, ಅನುಭವವು ಕಲಿಸುವ ಪಾಠ ಎಂದೂ ಶಾಶ್ವತ, ಜಗದಲ್ಲಿ ಅನುಭವವು ಕಲಿಸುವ ಪಾಠ ಎಂದೂ ಶಾಶ್ವತ…
✍️ಉಲ್ಲಾಸ್ ಕಜ್ಜೋಡಿ