
ನಡುಗಲ್ಲು ಸ.ಹಿ.ಪ್ರಾ ಶಾಲೆಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಮುಖ್ಯಮಂತ್ರಿ ಸ್ಥಾನಕ್ಕೆ 4 ಅಭ್ಯರ್ಥಿಗಳು,ಉಪಮುಖ್ಯಮಂತ್ರಿ ಸ್ಥಾನಕ್ಕೆ 5 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು. ನಾಮಪತ್ರ ಪರಿಶೀಲನೆ ವೇಳೆ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದರು. ಚುನಾವಣಾಧಿಕಾರಿಗಳಾಗಿ ಶಿಕ್ಷಕರುಗಳಾದ ಕುಶಾಲಪ್ಪ ಟಿ., ಕು.ಸುಧಾರಾಣಿ, ಶ್ರೀಮತಿ ಮೋಕ್ಷ ಸಹಕರಿಸಿದರು. ಚಂದ್ರಶೇಕರ ಪಿ. ಇವರು ಸಲಹೆಗಾರರಾಗಿ ಸಹಕರಿಸಿದರು. ಮತದಾನ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಪತ್ರಗಳ ಎಣಿಕೆ ನಡೆಯಿತು. ಅಂತಿಮವಾಗಿ ಯಶ್ವಿತ್ ಎಂ.ಎಂ. ಏಳನೇ ತರಗತಿ ಇವನು ಮುಖ್ಯಮಂತ್ರಿಯಾಗಿ, ಕೌಶಿಕ್ ಎನ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಫಲಿತಾಂಶ ಪ್ರಕಟವಾದ ನಂತರ ಸಚಿವ ಸಂಪುಟ ರಚನೆಯಾಯಿತು. ವಿರೋಧ ಪಕ್ಷದ ನಾಯಕನಾಗಿ ರಚನ್ ಕೆ., ನಾಯಕಿಯಾಗಿ ಜಿಶಾ ಡಿ.ಎನ್, ಶಿಕ್ಷಣಮಂತ್ರಿಯಾಗಿ ಆದ್ಯ ಎನ್., ಉಪಶಿಕ್ಷಣಮಂತ್ರಿಯಾಗಿ ಶೃತಿ, ಆರೋಗ್ಯಮಂತ್ರಿಯಾಗಿ ಆದಿತ್ಯ, ಕ್ರೀಡಾ ಮಂತ್ರಿಯಾಗಿ ದೀಕ್ಷಿತ್, ಉಪಕ್ರೀಡಾ ಮಂತ್ರಿಯಾಗಿ ನಿರೀಕ್ಷ , ಸಾಂಸ್ಕೃತಿಕ ಮಂತ್ರಿಯಾಗಿ ಶ್ರೇಯ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ತೃಪ್ತಿ, ಕೃಷಿ ಮಂತ್ರಿಯಾಗಿ ಆಶ್ಲೇಷ್, ಉಪ ಕೃಷಿ ಮಂತ್ರಿಯಾಗಿ ಹನ್ವಿತ್,ಗೃಹ ಮಂತ್ರಿಯಾಗಿ ಚಿಂತನ್, ಉಪಗೃಹ ಮಂತ್ರಿಯಾಗಿ ದೀಪಕ್, ಆಹಾರ ಮಂತ್ರಿಯಾಗಿ ಧನುಷ್, ಉಪ ಆಹಾರ ಮಂತ್ರಿಯಾಗಿ ಜಸ್ಮಿ, ಸ್ವಚ್ಚತಾ ಮಂತ್ರಿಯಾಗಿ ಗೌರವಿ, ಉಪ ಸ್ವಚ್ಚತಾ ಮಂತ್ರಿಯಾಗಿ ಗೌತಮ್ ಎಂ.ಬಿ., ನೀರಾವರಿ ಮಂತ್ರಿಯಾಗಿ ಗಿನೀಶ್, ಉಪ ನೀರಾವರಿ ಮಂತ್ರಿಯಾಗಿ ನಿಖಿಲ್, ವಾರ್ತಾ ಮಂತ್ರಿಯಾಗಿ ಧನ್ವಿತ, ಉಪ ವಾರ್ತಾ ಮಂತ್ರಿಯಾಗಿ ಧೃತಿ ಆಯ್ಕೆಯಾದರು.