ಜೇಸಿಐ ಪಂಜ ಪಂಚಶ್ರೀ ಹಾಗೂ ಸಾನಿಕ ನರ್ಸರಿ ಪಂಜ ಇದರ ಸಹಯೋಗದಲ್ಲಿ ಗೋ – ಗ್ರೀನ್ ಹಬ್ಬ 2022 ವಿಶ್ವ ಪರಿಸರ ದಿನಾಚರಣೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಂಜದಲ್ಲಿ ಆಚರಿಸಲಾಯಿತು.
ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಯ ಘಟಕಾಧ್ಯಕ್ಷರಾದ ಜೇಸಿ.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಾನಿಕ ನರ್ಸರಿ ಪಂಜ ಇದರ ಮಾಲಕ ಜೇಸಿ ದಯಪ್ರಸಾದ ಚೀಮುಳ್ಳು, ಶ್ರೀಮತಿ ತುಳಸಿ ದಯಪ್ರಸಾದ ಚೀಮುಳ್ಳು, ಸಾನಿಕ ಚೀಮುಳ್ಳು ಮತ್ತು ಮೊರಾರ್ಜಿ ವಸತಿ ಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು. ಘಟಕಾಧ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿ, ಕಾರ್ಯದರ್ಶಿ ಕೌಶಿಕ್ ಕುಳ ವಂದಿಸಿದರು.ಕಾರ್ಯಕ್ರಮದಲ್ಲಿ ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ. ಸೋಮಶೇಖರ ನೇರಳ, ಜೇಸಿ. ಸುದರ್ಶನ ಪಟ್ಟಾಜೆ, ಜೇಸಿ. ತೀರ್ಥನಂದ ಕೊಡಂಕಿರಿ,ಜೇಸಿ.ನಾಗಮಣಿ ಕೆದಿಲ ಉಪಾಧ್ಯಕ್ಷರಾದ ಜೇಸಿ. ದೇವಿಪ್ರಸಾದ್ ಚಿಕ್ಮುಳಿ ಸದಸ್ಯರಾದ ಜೇಸಿ. ಆದಿತ್ಯ ಚಿದ್ಗಲ್ಲು, ಜೇಸಿ.ಜೀವನ್ ಶೆಟ್ಟಿ ಗದ್ದೆ ಜೇಸಿ. ಗಗನ್ ಕಿನ್ನಿಕುಮೇರಿ ಜೇಸಿ. ಲೋಹಿತ್ ಬಪ್ಪನಮನೆ ಭಾಗವಹಿಸಿದ್ದರು. ಭಾರತೀಯ ಜೇಸಿಸ್ ನ ವಲಯ 15ರ ನಿರ್ದೇಶನದಂತೆ ಸುಮಾರು 50 ಕಹಿಬೇವಿನ ಗಿಡಗಳನ್ನು ಹಾಗೂ ಹಲವಾರು ಹಣ್ಣಿನ ಗಿಡಗಳನ್ನು ಶಾಲೆಯ ಸುತ್ತಮುತ್ತಲು ನೆಡಲಾಯಿತು.