ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆ ನಡೆದ ಮರುದಿನ ಇಡಿ ಮಾರುಕಟ್ಟೆ ಕೊಳೆತ ಸಾಮಾಗ್ರಿಗಳಿಂದ ನಾರುತ್ತದೆ. ಅಲ್ಲದೆ ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಕೊಳೆತ ವಾಸನೆ ಇನ್ನೂ ಹೆಚ್ಚಾಗಿ ಇಡೀ ಪರಿಸರವನ್ನು ಆವರಿಸುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕ್ರಮ ತೆಗೆದುಕೊಂಡು ಸಾರ್ವಜನಿಕರು ಶುದ್ಧ ಗಾಳಿ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಅನುವು ಮಾಡಿಕೊಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕಾಧ್ಯಕ್ಷರಾದ ಸದಾಶಿವ ಪೂಜಾರಿ ಬೆಳ್ಳಾರೆ ಒತ್ತಾಯಿಸಿದ್ದಾರೆ.