
ಅಜ್ಜಾವರ ಅಡ್ಪಂಗಾಯ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಮೀಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಅಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಮೀಯತುಲ್ ಫಲಾಹ್ ಅಧ್ಯಕ್ಷರಾದ ಹಸ್ಯೆನಾರ್ ಹಾಜಿ ಗೊರಡ್ಕ, ಕಾರ್ಯದರ್ಶಿ ಹಸ್ಯೆನಾರ್ ವಳಂಲಬೆ, ನಿರ್ದೇಶಕರಾದ ಸಿದ್ದೀಕ್ ಕಟ್ಟೆಕಾರ್, ಮತ್ತು ಶಾಲಾ ಮುಖ್ಯೋಪಾಧ್ಯಾಯ ಹೀರಾ ಸಾಹೇಬ್,ಅದುಂಞ ಗೊರಡ್ಕ ಹಾಗೂ ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಬಾಗವಹಿಸಿದರು.ಅಲ್ಲದೆ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಹೀರಾ ಸಾಹೇಬ್, ಜಮೀಯತುಲ್ ಫಲಾಹ್ ಕಾರ್ಯದರ್ಶಿ ಹಸ್ಯೆನಾರ್ ವಳಂಲಬೆ,ಜಮೀಯತುಲ್ ಫಲಾಹ್ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾದ ಹಸ್ಯೆನಾರ್ ಹಾಜಿ ಗೊರಡ್ಕ ರವರು ವಿಶ್ವ ಪರಿಸರ ದಿನದ ಬಗ್ಗೆ ಸಂದೇಶಗಳನ್ನು ನೀಡಿದರು. ನಿರ್ದೇಶಕ ಸಿದ್ದೀಕ್ ಕಟ್ಟೆಕಾರ್ ಶುಭ ಹಾರೈಸಿದರು. ಸಹ ಶಿಕ್ಷಕಿಯರಾದ ಬಿಂದು ರವರು ಕಾರ್ಯಕ್ರಮ ನಿರೂಪಿಸಿದರು.