ಎತ್ತರದ ಆಗಸದಿ ತಂಪಾದ ಮಳೆ ಹನಿಯು ಇಂಪಾದ ಸದ್ದಿನಲಿ ಭುವಿಯ ಸೇರುತಿದೆ, ಇಳೆಯ ತಂಪಾಗಿಸುತಿದೆ…
ಪಟ ಪಟನೇ ಬೀಳುವ ಮಳೆ ಹನಿಯ ಸದ್ದು ಕಿವಿಗೆ ಇಂಪು, ಮನಸಿಗೆ ನೀಡುತಿದೆ ತಂಪು…
ಜೋರಾಗಿ ಮಳೆ ಬಂದು ನಿಂತ ಆ ಕ್ಷಣ ಸುತ್ತಲಿನ ಪರಿಸರವು ಹಸಿರಾಗಿ ತುಂಬಿ, ಹಕ್ಕಿಗಳ ಚಿಲಿಪಿಲಿ ನಾದವು ಇಂಪಾಗಿ ಕೇಳುತಿದೆ, ಕಿವಿಗೆ ಇಂಪಾಗಿ ಕೇಳುತಿದೆ…
ಸದ್ದಿಲ್ಲದೇ ಬರುವ ಆ ಮಳೆಯ ಜೊತೆಗೆ ಸದ್ದಿನೊಂದಿಗೆ ಬರುವ ಗುಡುಗು ಸಿಡಿಲಿನ ಸದ್ದು ಭಯವ ತರಿಸುತಿದೆ, ಮನಸಿಗೆ ತುಸು ಭಯವ ತರಿಸುತಿದೆ…
ಆ ಭಯದ ನಡುವೆಯೂ ಮಳೆ ಹನಿಯ ಶಬ್ದಕ್ಕೆ ಕಣ್ಣು ತೂಗಿದೆ, ನಿದ್ರೆ ಆವರಿಸಿದೆ…
ಕತ್ತಲು ಕಳೆದು ಬೆಳಕು ಹರಿದಾಗ ನೇಸರನ ಬೆಳಕು ಇಳೆಗೆ ಬಿದ್ದಾಗ ತಂಪಾದ ಭೂಮಿಯು ಹಸಿರಾಗಿ ಕಂಗೊಳಿಸಿದೆ, ಹಸಿರಾದ ಪರಿಸರವು ಉಸಿರಾಗಿದೆ, ಕೋಟಿ ಜೀವರಾಶಿಗಳಿಗೆ ಉಸಿರಾಗಿದೆ…
✍️ಉಲ್ಲಾಸ್ ಕಜ್ಜೋಡಿ