
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ ಕೆ.ವಿ.ಜಿ ಸರಕಾರಿ ಅನುದಾನಿತ ಪಾಲಿಟೆಕ್ನಿಕ್ ಸುಳ್ಯ ಇದರ ಉಪಪ್ರಾಂಶುಪಾಲರಾಗಿ ಆಟೋಮೋಬೈಲ್ ಇಂಜಿನಿಯರಿಂಗ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕ ಶ್ರೀಧರ ಎಂ.ಕೆ ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ನೇಮಕಗೊಳಿಸಿದ್ದಾರೆ. ಮಂಡ್ಯದ ಪಿ.ಎಸ್ ಕಾಲೇಜಿ ಆಪ್ ಇಂಜಿನಿಯರಿಂಗ್‌ನಿಂದ ಆಟೊಮೋಬೈಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದ ಇವರು ೧೯೯೮ ಆಗೋಸ್ಟ್ ೩ ರಂದು ಕೆ.ವಿ.ಜಿ ಪಾಲಿಟೆಕ್ನಿಕ್‌ಗೆ ಉಪನ್ಯಾಸಕರಾಗಿ ನೇಮಕಗೊಂಡರು. ನಂತರ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಅಲ್ಲದೇ ಕೆ.ವಿ.ಜಿ ಚಾಲನಾ ತರಬೇತಿ ಕೇಂದ್ರ ಮತ್ತು ಕೆ.ವಿ.ಜಿ ಸರ್ವಿಸ್ ಸ್ಟೇಶನ್‌ನ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೨೪ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕು ಮಲ್ಲಿಗೆರೆ ಶ್ರೀ ಕೃಷ್ಣಪ್ಪ ಎಂ.ಪಿ ಮತ್ತು ಶ್ರೀಮತಿ ಲಿಂಗಮ್ಮ ಕೆ.ಎಸ್ ದಂಪತಿಗಳ ಪುತ್ರ.