ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಾಜಿ ನಿರ್ದೇಶಕ, ಮಾಜಿ ಅಧ್ಯಕ್ಷ, ಹರ್ಷಕುಮಾರ ದೇವಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿನೂಪ್ ಮಲ್ಲಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ಜೂ.4ರಂದು ಅಧ್ಯಕ್ಷರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಣಿಕಂಠ ಕೊಳಗೆ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ವಿನೂಪ್ ಮಲ್ಲಾರ, ನಿರ್ದೇಶಕರುಗಳಾದ ಶೇಖರ್ ಅಂಬೆಕಲ್ಲು, ತಾರಾನಾಥ ಮುಂಡಾಜೆ, ಬೊಳಿಯ ಬೆಂಡೋಡಿ, ಮೋನಪ್ಪ ಕೊಳಗೆ, ರಾಜೇಶ್ ಪರಮಲೆ, ಗಿರೀಶ್ ಕಟ್ಟೆಮನೆ, ಬೊಳಿಯ ಬೆಂಡೊಡಿ, ವಿಜಯ ಕೆ ಜೆ, ವಿಜಯ ಕೆ ಎಸ್, ಸುರೇಶ್ ಚಾಳೆಪ್ಪಾಡಿ, ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಮನೋಜ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿ ಶಿವಲಿಂಗಯ್ಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
- Thursday
- November 21st, 2024