ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2021-22ನೇ ಸಾಲಿನ ದ್ವಿತೀಯ ಹಂತದ ಹಾಗೂ 2021-22ನೇ ಸಾಲಿನ 14 & 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ಜೂ.01 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾಮ ಸಭೆಯ ನೋಡೇಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಸುಳ್ಯ ಇದರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸುಹಾನ ಅವರು ಭಾಗವಹಿಸಿದ್ದರು. ತಾಲೂಕು ಸಂಯೋಜಕರು, ಸಾಮಾಜಿಕ ಪರಿಶೋಧನೆ ಸುಳ್ಯ
ಚಂದ್ರಶೇಖರ ಅವರು ಸಾಮಾಜಿಕ ಪರಿಶೋಧನಾ ವರದಿ ಸಿದ್ಧಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ.ಎ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಕೆ ಕಡ್ತಲ್ ಕಜೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಾಧವ ಚಾಂತಾಳ, ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಪುಷ್ಪರಾಜ್ ಪಡ್ಪು, ಮೋಹಿನಿ ಕಟ್ಟ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಿ, ಸವಿತಾ, ಸಂಧ್ಯಾ.ಬಿ, ಪ್ರತಿಭಾ.ಯು, ಮೈತ್ರಿ, ಅನುಷ್ಠಾನ ಇಲಾಖೆಗಳ ಅಧಿಕಾರಿಗಳಾದ ಶ್ರೀಮತಿ ಭವ್ಯ ಟಿ.ಎ.ಜಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ನವ್ಯ ನಡುಗಲ್ಲು, ವಸಂತ ಕೊರಂಬಟ, ಲೀಲಾವತಿ ಶಿರೂರು ಮಮತಾ ಮರಕತ, ಆಶಿಶ್ ಕಟ್ಟೆಮನೆ ಹಾಗೂ ಕೀರ್ತಿ ಸ್ವ ಸಹಾಯ ಸಂಘದ ಪದಾಧಿಕಾರಿಗಳಾದ ಲೀಲಾವತಿ ತಂಬಿನಡ್ಕ, ವಿಮಲಾಕ್ಷಿ ಗೋಳ್ಯಾಡಿ, ಸುನಂದ ಗಡಿಕಲ್ಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ