- Friday
- November 22nd, 2024
ಎ.22 ರಂದು ಸಂಜೆ ನಡುಗಲ್ಲುವಿನ ಮಹಿಳೆಯೊಬ್ಬರ ಪರ್ಸ್ ಬಸ್ಸೊಂದರಲ್ಲಿ ಕಾಣೆ ಆಗಿದ್ದು, ಆ ಪರ್ಸ್ ಬಸ್ ಕಂಡಕ್ಟರ್ ರಾಮಚಂದ್ರ ಅವರಿಗೆ ಸಿಕ್ಕಿದ್ದು, ಪರ್ಸ್ ನಲ್ಲಿ ಸುಮಾರು 14700 ರೂಪಾಯಿ ನಗದು ಇತ್ತು. ಎ.23 ರಂದು ಬೆಳಿಗ್ಗೆ ಕಂಡಕ್ಟರ್ ರಾಮಚಂದ್ರ ಅವರು ಪರ್ಸ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿದರು. ವರದಿ :- ಉಲ್ಲಾಸ್ ಕಜ್ಜೋಡಿ
ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಎ.20 ರಂದು ವೇದಮೂರ್ತಿ ಶಿವರಾಮ ಭಟ್ ಕಿಳಿಂಗಾರು ಅವರ ನೇತೃತ್ವದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಿತು.ಪೂರ್ವಾಹ್ನ ಗಣಪತಿ ಹವನ, ಶತರುದ್ರಾಭಿಷೇಕ, ಕಲಶಾಭೀಷೇಕ ನಡೆಯಿತು. ನಂತರ ಅಪರಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ದೀಪಾರಾಧನೆ, ತಾಯಂಬಿಕ, ರಂಗಪೂಜೆ, ಶ್ರೀ ಭೂತ ಬಲಿ ಹಾಗೂ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ...
ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ನಿಂದನೆ ಮಾಡಿದ ಪ್ರಕರಣದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ ರೈ ಅವರಿಗೆ ಸುಳ್ಯ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ತೀರ್ಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರಕಾರಿ ಅಧಿಕಾರಿಗಳು, ಸಾರ್ವಜನಿಕ ಸೇವೆಯಲ್ಲಿರುವವರನ್ನು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಕಕ್ಷಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ...
ಸುಳ್ಯದ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಶ್ರೀ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನ ಮತ್ತು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ.3 ರಂದು ಕೇಶವ ಕೃಪಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್...
ಐವರ್ನಾಡು ಗ್ರಾಮದ ದಿ.ಕೃಷ್ಣ ಅಂಗಿತ್ತಾಯ ಅವರ ಪುತ್ರ ಉದಯಕುಮಾರ ಭಟ್ ಹಸಿರುತೋಟ (51 ವ) ರವರು ಎ.22ರಂದು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಶ್ರೀಮತಿ ಶಾರದಾ, ಪತ್ನಿ ಶ್ರೀಮತಿ ಅಮೃತಲತಾ ಹಾಗೂ ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜನತಾದಳ ಜಾತ್ಯತೀತ ಪಕ್ಷದ ಜನತಾ ಜಲಧಾರೆ ರಥವು ರಾಜ್ಯದಾದ್ಯಂತ ಸಂಚರಿಸುತ್ತಿದ್ದು. ಸುಬ್ರಹ್ಮಣ್ಯಕ್ಕೆ ಎಪ್ರಿಲ್ 21ರಂದು ಜನತಾ ಜಲಧಾರೆ ರಥವು ಆಗಮಿಸಿದ್ದು ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ನೀರು ಸಂಗ್ರಹಿಸಿ ಪೂಜೆ ಸಲ್ಲಿಸಿ ಕಲಶಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಜನತಾದಳದ ಅಧ್ಯಕ್ಷರಾದ ಜಾಕೆ ಮಾಧವ ಗೌಡ ದ.ಕ. ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷತ್ ಸುವರ್ಣ ಜಿಲ್ಲಾ...
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಮಾರ್ಚ್ 12 ಮತ್ತು 13 ದಿನಾಂಕಗಳಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಪೈಂಬೆಚ್ಚಾಲು ಹಯಾತುಲ್ ಇಸ್ಲಾಂ ಮದ್ರಸದ 5,7 ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ 100% ಫಲಿತಾಂಶ ದೊರಕಿದೆ. ಹಾಗೂ 10ನೇ ತರಗತಿಯ ಆಯಿಷತ್ ಶಂನ ಎಂ.ಪಿ ಎಲ್ಲಾ ವಿಷಯಗಳಲ್ಲಿಯೂ A+ ಹಾಗೂ...
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮೋಹನಕುಮಾರ ಗೌಡರ ಮನೆಯಲ್ಲಿ ಜೋಡು ಕಲ್ಲುರ್ಟಿ ದೈವಗಳ ನೇಮೋತ್ಸವವು ಏ.20 ರಂದು ನಡೆಯಿತು.
ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಿ.ಜಿ ಮುಡೂರು(95) ಇಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾಡಿನ ಅಗ್ರಮಾನ್ಯ ಸಾಹಿತಿಯಾಗಿದ್ದ ಮುಡೂರುರವರು ತಮ್ಮ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದ ಇದ್ದರು. ಅಧ್ಯಾಪಕರಾಗಿ, ಸಾಹಿತಿಯಾಗಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ ಮುಡೂರುರವರಿಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅರೆಭಾಷೆ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಕಾಡಮಲ್ಲಿಗೆ, ಹೊಸತು ಕಟ್ಟು, ಅಬ್ಬಿಯ ಮಡಿಲು ಸೇರಿದಂತೆ...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಮಂಗಳೂರಿನ ಬೊಕ್ಕಪಟ್ಟಣದ ಅಬ್ಬಕ್ಕ ವಿಹಾರ ನೌಕೆಯಲ್ಲಿ ನಡೆದ ರಾಷ್ಟ್ರೀಯ ಸಾಹಿತ್ಯ ಸಮಾರಂಭದಲ್ಲಿ ಜ್ಯೋತಿಷಿ ಮತ್ತು ಸಾಹಿತಿ ಎಚ್ . ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ ಸಜ್ಜಲಾಂಬೆ ಶ್ರೀ ಶರಣಮ್ಮ ತಾಯಿ ವಿಡಿಯೋ ಭಕ್ತಿಗೀತೆಯನ್ನು ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶ ಇದರ ಮಾಜಿ ಉಪಾಧ್ಯಕ್ಷರಾದ ಕ್ಯಾ...
Loading posts...
All posts loaded
No more posts