- Friday
- November 22nd, 2024
2025 ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ಕೇಂದ್ರ ಸರಕಾರದ ಘೋಷಣೆಯಂತೆ ಸುಳ್ಯ ತಾಲ್ಲೂಕನ್ನು 2025ಕ್ಕೆ ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಜ್ಞೆಯನ್ನು ಸುಳ್ಯ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.ನಂದಕುಮಾರ್, ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ಪಂಜ...
ಇಂದು ಸಂಜೆ ಸುರಿದ ಭಾರಿ ಗಾಳಿ, ಮಳೆಗೆ ಐವರ್ನಾಡಿನಲ್ಲಿ ಮರ ಧರೆಗುರುಳಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದುದರಿಂದ ಸಂಚಾರಕ್ಕೆ ಕೆಲಸಮಯ ತೊಡಕುಂಟಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಸೇರಿ ಮರವನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ಧನಂಜಯ್ ಕಳಂಜ ಮಾಲಕತ್ವದ ಧನು ಅಸೋಸಿಯೇಟ್ಸ್ ಎ.09ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಜಿ.ಎಸ್.ಟಿ ರಿಜಿಸ್ಟ್ರೇಷನ್ ಮತ್ತು ಫೈಲಿಂಗ್, ಆಡಿಟಿಂಗ್, ಆದಾಯ ತೆರಿಗೆ ಸಂಬಂಧಿತ ಕೆಲಸಗಳು, ಸೊಸೈಟಿ ರಿಜಿಸ್ಟ್ರೇಷನ್, ಇ-ಟಿ.ಡಿ.ಎಸ್ ಪಾನ್ ಕಾರ್ಡ್, ಪ್ರಾಜೆಕ್ಟ್ ರಿಪೋರ್ಟ್, ಆಧಾರ್ ತಿದ್ದುಪಡಿ ಹಾಗೂ ಇನ್ನಿತರ ಸೇವೆಗಳು ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರಾದ ಧನಂಜಯ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರು ಒಕ್ಕೂಟದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಎ.04 ರಂದು ರಚನೆ ಮಾಡಲಾಯಿತು.ಒಕ್ಕೂಟದ ನೂತನ ಅಧ್ಯಕ್ಷರಾಗಿ ತೀರ್ಥರಾಮ ದೋಣಿಪಳ್ಳ, ಉಪಾಧ್ಯಕ್ಷರಾಗಿ ಯೋಗೀಶ್ ಶಿವಾಲ, ಕಾರ್ಯದರ್ಶಿಯಾಗಿ ಮಾಲಾಶ್ರೀ ಜಾಲುಮನೆ, ಜತೆ ಕಾರ್ಯದರ್ಶಿಯಾಗಿ ಅನಿತಾ ಬೊಂಬಿಲ ಹಾಗೂ ಕೋಶಾಧಿಕಾರಿಯಾಗಿ ಕುಮುದಾಕ್ಷಿ ಪನ್ನೆ ಆಯ್ಕೆಯಾದರು.ಹಾಗೂ ನೂತನ ಉಪಸಮಿತಿ...
ಪುತ್ತೂರಿನಲ್ಲಿ ಕಾರ್‍ಯಾಚರಿಸುತ್ತಿರುವ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ಮೂರನೇ ಶಾಖೆ ಸುಳ್ಯದ ಶ್ರೀರಾಮಪೇಟೆ ಸಾಯಿ ರಾಮ್ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಗಣೇಶ್ ಮತ್ತು ಫುಲ್ಲಾ ಗಣೇಶ್‌ರವರ ಪುತ್ರಿ ಕುಮಾರಿ ತನಯ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ...
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ದಿ.ಹುಕ್ರಪ್ಪ ಗೌಡರ ಪುತ್ರ ಲೋಕೇಶರವರ ವಿವಾಹವು ಕಲ್ಮಕಾರು ಗ್ರಾಮದ ಪಡ್ಪು ವಸಂತ ಗೌಡರ ಪುತ್ರಿ ಕುಲಶ್ರೀ (ಕವಿತಾ) ರೊಂದಿಗೆ ಏ. 7ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸುಳ್ಯ: ತಾಲೂಕಿನ ಬೈರಾ ಸಮಾಜದ ಕ್ರೀಡಾಕೂಟ ಏಪ್ರಿಲ್ 3 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ ಇಂಜಿನಿಯರ್ ರಾಮ ಬೇಲ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಕುರುಂಜಿಭಾಗ್ ವಹಿಸಿದ್ದರು. ವೇದಿಕೆಯಲ್ಲಿ ದಾಮೋದರ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು. ಮಹಿಳೆಯರಿಗೆ ಹಗ್ಗ ಜಗ್ಗಾಟ,ತ್ರೊಬಾಲ್, ಪುರುಷರಿಗೆ ಕ್ರಿಕೆಟ್...
ದೇವಚಳ್ಳ ಗ್ರಾಮದ ತಳೂರು ಶ್ರೀ ರಾಜ್ಯದೈವ ಪುರುಷದೈವ ದೈವಸ್ಥಾನದ ಜಾತ್ರೋತ್ಸವ ಏ.7 ರಿಂದ ಏ.8ವರೆಗೆ ನಡೆಯಲಿದೆ.ಏ.7ರಂದು ರಾತ್ರಿ 7 ಗಂಟೆಯಿಂದ ತಳೂರು ಅಂಗನವಾಡಿ ಪುಟಾಣಿಗಳಿಂದ, ತಳೂರು-ಮೆತ್ತಡ್ಡ ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲ ತಳೂರು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲರವ, ರಾತ್ರಿ 9.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ...
ಬಾರ್ ಅಸೋಸಿಯೇಷನ್ ಸುಳ್ಯದ 2022-2024ರ ಪದಗ್ರಹಣ ಸಮಾರಂಭ ಏ.6 ರಂದು ಸುಳ್ಯದ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆಡಿಷನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗ ವೃತ್ತಿಯು ಸತ್ಯ ಮತ್ತು ನ್ಯಾಯದ ಪರ ಇರುತ್ತದೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಬದಲಾವಣೆ ತರಿಸುವಂತದ್ದು ನ್ಯಾಯಾಧೀಶರಾಗಿರುತ್ತಾರೆ. ಇದರಿಂದಾಗಿ...
Loading posts...
All posts loaded
No more posts