Ad Widget

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸೇವೆಗೊಲಿದ ರಾಜ್ಯ ಪ್ರಶಸ್ತಿ

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ 2022 ನೇ ಸಾಲಿನ ಯುವಸೇವೆ ಹಾಗೂ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಗೆ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯಾಗಿದ್ದು, ಯುವಸೇವೆ ಮತ್ತು ಕ್ರೀಡೆ ಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ದಲ್ಲಿ ಸಾಂಘಿಕ ಪ್ರಶಸ್ತಿ ಗೆ ಎರಡೇ ಸಂಸ್ಥೆಗಳು ಆಯ್ಕೆ ಆಗಿವೆ....

ಶೇಣಿ : ಇ- ಶ್ರಮ್ ಕಾರ್ಡ್‌, ಪಾನ್ ಕಾರ್ಡ್‌ ನೋಂದಣಿ ಶಿಬಿರ

ಸಾರ್ವಜನಿಕರ ಶ್ರೀಕೃಷ್ಣ ಸೇವಾ ಸಮಿತಿ ಶೇಣಿ ಇದರ ನೇತೃತ್ವದಲ್ಲಿ ಜ 23, ಆದಿತ್ಯವಾರದಂದು ಬೆಳಿಗ್ಗೆ 9 ರಿಂದ ಶೇಣಿ ಸ.ಹಿ.ಪ್ರಾ.ಶಾಲೆಯಲ್ಲಿ ಅಸಂಘಟಿತ ಕಾರ್ಮಿಕರ ಇ- ಶ್ರಮ್ ಕಾರ್ಡ್‌ ನೋಂದಣಿ ಹಾಗೂ ಪಾನ್ ಕಾರ್ಡ್‌ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ತಿಳಿಸಿದ್ದಾರೆ.
Ad Widget

ಜ.23: ಕೇರ್ಪಡ ಶ್ರೀ ಮಹಿಷಮರ್ದಿನಿ‌ ಯಕ್ಷಗಾನ ಕಲಾ ಕೇಂದ್ರದ ವತಿಯಿಂದ 2ನೇ ವರ್ಷದ ಯಕ್ಷಗಾನ ನಾಟ್ಯ ತರಬೇತಿ ಆರಂಭ

ಶ್ರೀ ಮಹಿಷಮರ್ದಿನಿ‌ ಯಕ್ಷಗಾನ ಕಲಾ ಕೇಂದ್ರ ಕೇರ್ಪಡ ಇದರ ವತಿಯಿಂದ ಎರಡನೇ ವರ್ಷದ ಯಕ್ಷಗಾನ ನಾಟ್ಯ ತರಬೇತಿ ಶ್ರೀ ಯಕ್ಷಮಣಿ ಗಿರೀಶ್ ಗಡಿಕಲ್ಲು ಇವರಿಂದ 23.01.2022 ನೇ ಆದಿತ್ಯವಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇಲ್ಲಿ ಪ್ರಾರಂಭವಾಗಲಿದೆ. ಕಳೆದ ವರ್ಷ 23 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿರುತ್ತಾರೆ.

ಪರ್ಸ್ ಕಳೆದುಹೋಗಿದೆ

ಕಂದ್ರಪ್ಪಾಡಿ ಮಾವಿನಕಟ್ಟೆ ರಸ್ತೆ ಮಧ್ಯೆ ಒಂದು ಪರ್ಸ್ ಕಳೆದು ಹೋಗಿದೆ. ಅದರಲ್ಲಿ ಆಧಾರ್ ಕಾರ್ಡ್, ಎಟಿಎಂ, ಹಣ ಇದ್ದು ಕಳೆದುಕೊಂಡವರ ಫೋಟೋ ಹಾಗೂ ಇತರ ದಾಖಲೆ ಇದೆ. ದಯವಿಟ್ಟು ಸಿಕ್ಕಿದವರು ಹಿಂದಿರುಗಿಸಬೇಕಾಗಿ ವಿನಂತಿ.87626766516364659441

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ ವಾರ್ಷಿಕೋತ್ಸವ ಸಮಾರೋಪ ಸಮಾರಂಭ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಸಪ್ತಾಹ ನಡೆದು ಜ.21ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಜರುಗಿತು. ಸಾರ್ವಜನಿಕ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷರಾದ ಯು.ರಾಧಾಕೃಷ್ಣ ರಾವ್ ಉಡುವೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಅಭ್ಯಾಗತರ ಸ್ವಾಗತಗೈದ ಶ್ರೀ ಮಹಾವಿಷ್ಣು ಸಿಂಗಾರಿ...

ವಿಜೃಂಭಣೆಯಿಂದ ಜರುಗಿದ ಪೆರುವಾಜೆ ಶ್ರೀ ಜಲದುರ್ಗಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16ರಿಂದ ಜ.21ರವರೆಗೆ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವದ ಅಂಗವಾಗಿ ಜ.16ರಂದು ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ದೇವತಾ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ ನಡೆಯಿತು. ಜ.17ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು...

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ ವಾರ್ಷಿಕೋತ್ಸವ ಸಮಾರೋಪ ಸಮಾರಂಭ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಸಪ್ತಾಹ ನಡೆದು ಜ.21ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಜರುಗಿತು. ಸಾರ್ವಜನಿಕ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷರಾದ ಯು.ರಾಧಾಕೃಷ್ಣ ರಾವ್ ಉಡುವೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಅಭ್ಯಾಗತರ ಸ್ವಾಗತಗೈದ ಶ್ರೀ ಮಹಾವಿಷ್ಣು ಸಿಂಗಾರಿ...

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ವಿಶೇಷ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ದಿನಾಂಕ 20/01/ 2022 ರಂದು ಸಂಘದ ಆಶ್ರಯದಲ್ಲಿ ಮತ್ತು ನೆಟ್ ಸರ್ಪ್ ಕಂಪನಿ ಸಹಯೋಗದಲ್ಲಿ ವಿಶೇಷ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ರೈತ ಸ್ನೇಹಿತರ ಕೂಟ ಮತ್ತು ಸಾಯ ಎಂಟರ್ ಪ್ರೈಸಸ್ ಪುತ್ತೂರು ಸಹಯೋಗದಲ್ಲಿ ಅಡಿಕೆ ಕೊಯ್ಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ...

ವಿವಾಹ ನಿಶ್ಚಿತಾರ್ಥ
: ಜಯಂತ್ ಆರ್ ಕೆ – ಸ್ವಾತಿ ಎಂ ಎಂ

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ|ಕೃಷ್ಣ ನಾಯ್ಕರ ಚತುರ್ಥ ಪುತ್ರ ಜಯಂತ್ ಆರ್ ಕೆ ರವರ ವಿವಾಹ ನಿಶ್ಚಿತಾರ್ಥವು ಮಡಿಕೇರಿ ತಾಲೂಕಿನ ಯಂ.ಚೆಂಬು ಗ್ರಾಮದ ಮಾಪ್ಲಕಜೆ ಮಹಾಲಿಂಗ ನಾಯ್ಕರ ಸುಪುತ್ರಿ ಸ್ವಾತಿ ಎಂ ಎಂ ರವರೊಂದಿಗೆ 17 ಜನವರಿ 2022 ರಂದು ವಧುವಿನ ಮನೆಯಲ್ಲಿ ನಡೆಯಿತು.

ಶುಭವಿವಾಹ: ಪ್ರವೀಣ. ಪಿ- ಚೈತ್ರ.ಬಿ

ಅಮರಮುಡ್ನೂರು ಗ್ರಾಮದ ಪಿಲಿಕಜೆ ಶ್ರೀ ಸೀತಾರಾಮ ಗೌಡರ ಸುಪುತ್ರ ಚಿ|ರಾ| ಪ್ರವೀಣ. ಪಿ ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಶ್ರೀ ಗಣೇಶ ಗೌಡರ ಸುಪುತ್ರಿ ಚಿ|ಸೌ| ಚೈತ್ರ.ಬಿ ರೊಂದಿಗೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.20ರಂದು ನಡೆಯಿತು. ಅದೇ ದಿನ ಅತಿಥಿ ಸತ್ಕಾರ ಕಾರ್ಯಕ್ರಮವು ಪಿಲಿಕಜೆ ವರನ ಮನೆಯಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!